ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

 

ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ಹುದ್ದೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ : ಶೇ.50 ಅಂಕಗಳೊಂದಿಗೆ ಪದವಿ ಉತ್ತೀರ್ಣ ಜೊತೆಗೆ ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೊಮಾ ಪಾಸಾಗಿರಬೇಕು ಅಥವಾ ಬಿ.ಎಡ್ ಪದವಿ ಅಥವಾ ವಿಶೇಷ ಶಿಕ್ಷಣ ಪದವಿ/ಶೇ.50 ಅಂಕಗಳೊಂದಿಗೆ ಪಿಯುಸಿ ಪಾಸಾಗಿರಬೇಕು ಮತ್ತು 4  ವರ್ಷಗಳ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಶನ್ ಪದವಿ/ನಾಲ್ಕು ವರ್ಷಗಳ ಬಿಎಡ್ ಪಾಸಾಗಿರಬೇಕು.

ಕಾಲಕಾಲಕ್ಕೆ ಎನ್‌ಸಿಟಿಇ ನಿಗದಿಪಡಿಸಿದ ಯಾವುದಾದರೂ ಉನ್ನತ/ಹೆಚ್ಚುವರಿ ವಿದ್ಯಾರ್ಹತೆ ಹೊಂದಿರಬೇಕು. ಕರ್ನಾಟಕ/ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೇಪರ್-2 ರಲ್ಲಿ ಅರ್ಹತೆ ಗಳಿಸಿರಬೇಕು. ಅರ್ಜಿಯಲ್ಲಿ ವಿದ್ಯಾರ್ಹತೆಯ ಅಂಕಗಳನ್ನು ನಮೂದಿಸುವಾಗ ಗ್ರೇಡ್ ಪಾಯಿಂಟ್ ಬದಲಾಗಿ ಸಂಬಂಧಪಟ್ಟ ವಿವಿ ನಿಯಮಾನುಸಾರ ಸಮಾನಾಂತರ ಶೇಕಡಾವಾರು ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು.

 

ವಯೋಮಿತಿ : ಕನಿಷ್ಠ 21, ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 40  ವರ್ಷಗಳು, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು, ಪ.ಜಾ/ಪ.ಪಂ/ಪ್ರ ವರ್ಗ 1  ಅಭ್ಯರ್ಥಿಗಳಿಗೆ 45 ವರ್ಷಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.04.2019.

ಹೆಚ್ಚಿನ ವಿವರಗಳಿಗಾಗಿ :www.schooleducation.kar.nic.in

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.