ನಳಿನ್ ಕಟೀಲ್ ನಿಷ್ಕ್ರೀಯ ಸಂಸದ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್

Advt_Headding_Middle
Advt_Headding_Middle

ದ.ಕ. ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಸಂಸದರಾಗಿರುವ ನಳಿನ್‌ಕುಮಾರ್ ಕಟಿಲ್‌ರವರು ರಾಜ್ಯದ ನಿಷ್ಕ್ರೀಯ ಸಂಸದರಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್ ಹೇಳಿದ್ದಾರೆ.

ಮಾ. 16 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ದ.ಕ.ಜಿಲ್ಲೆಯಲ್ಲಿ ಹಲವು ಮಂದಿ ಸಂಸದರು ಚುನಾವಣೆಯಲ್ಲಿ ಗೆದ್ದು, ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ನಾವು ಕಂಡಿದ್ದೇವೆ. ಆದರೆ ಕಳೆದ ೧೦ ವರ್ಷಗಳಲ್ಲಿ ದ.ಕ.ಜಿಲ್ಲೆ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿಲ್ಲ. ಸಂಸದ ನಳಿನ್‌ರವರು ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರ ಕುರಿತು ಅವರ ಪಕ್ಷದವರಿಗೇ ಅಸಮಾಧಾನ ಇದೆ. ರಾಜ್ಯದಲ್ಲಿಯೇ ನಿಷ್ಕ್ರೀಯ ಸದಸ್ಯರೆಂದರೆ ಅದು ಸಂಸದ ಕಟೀಲ್. ಈ ಬಾರಿ ಜಿಲ್ಲೆಯ ಎಲ್ಲಾ ಪ್ರಜ್ಞಾವಂತರು ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತಾರೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.