Breaking News

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ಸ್ವಚ್ಚತಾ ಕಾರ್ಯಾಗಾರ

Advt_Headding_Middle
Advt_Headding_Middle

ವಿಶ್ವಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ಆಶ್ರಯದಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಗ್ರಾಮ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ಭಜರಂಗ ದಳ ಯುವ ಸೇವಾ ಸಪ್ತಾಹ ದಿನದ ಅಂಗವಾಗಿ ಕುಮಾರಧಾರ ನದಿ ತೀರ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಭಜರಂಗ ದಳ, ವಿಶ್ವಹಿಂದೂ ಪರಿಷತ್ ಮತ್ತು ಎಬಿವಿಪಿ ಕಾರ್ಯಕರ್ತರು ಬುಧವಾರ ಕುಮಾರಧಾರ ನದಿ ತೀರದಲ್ಲಿ ಸ್ವಚ್ಚತೆ ನೆರವೇರಿಸಿದರು.
ಕುಮಾರಧಾರ ಸೇತುವೆ ಬಳಿಯಿಂದ ಮುಂದೆ ಜಗಳಕದ ಗುಂಡಿ ಸೇರಿದಂತೆ ಕುಮಾರಧಾರ ನದಿ ತೀರದಲ್ಲಿದ್ದ ಬಟ್ಟೆ, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಇತ್ರ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಅಲ್ಲದೆ ನೀರಿನ ಒಳಗೆ ಇದ್ದ ಬಟ್ಟೆಗಳನ್ನು ಹೊರ ತೆಗೆದು ಸಂಗ್ರಹಿಸಲಾಯಿತು. ಬಳಿಕ ಸಂಗ್ರಹಿತ ತ್ಯಾಜ್ಯಗಳನ್ನು ಗ್ರಾ.ಪಂ.ನ ತ್ಯಾಜ್ಯ ಘಟಕಕ್ಕೆ ರವಾನಿಸಲಾಯಿತು.
ಈ ಸಂದರ್ಭದಲ್ಲಿ  ಯಜ್ಞೇಶ್ ಆಚಾರ್ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಪ್ರಾಂತ ಸಂಯೋಜಕರಾದ ಸುನೀಲ್ ಕೆ.ಆರ್, ಪುತ್ತೂರು ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಸುಳ್ಯ ಪ್ರಖಂಡ ಸಂಯೋಜಕ ಪ್ರಸಾದ್ ಕೆ.ರೈ ಕುಮಾರಧಾರ, ವಿಶ್ವಹಿಂದೂ ಪರಿಷತ್ ಭಜರಂಗ ದಳದ ಸುಬ್ರಹ್ಮಣ್ಯ ಘಟಕದ ಕಾರ್ಯದರ್ಶಿ ಶ್ರೀಕುಮಾರ್ ನಾಯರ್ ಬಿಲದ್ವಾರ, ಪ್ರಮುಖರಾದ ದಿನೇಶ್ ಸಂಪ್ಯಾಡಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಮತ್ತು ಎಬಿವಿಪಿ ಸುಬ್ರಹ್ಮಣ್ಯ ಘಟಕದ ಕಾರ್ಯಕರ್ತರು ಸ್ವಚ್ಚತಾ ಸೇವೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.