Breaking News

ಅಡ್ಕಾರು: ಮನೆಯ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

Advt_Headding_Middle
Advt_Headding_Middle

ಮನೆಯ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆ ಸಂಪೂರ್ಣ ಹೊತ್ತಿ ಉರಿದು ಬೆಂಕಿಗಾಹುತಿಯಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಮಾ.11ರಂದು ಸಂಭವಿಸಿದೆ.

ಅಡ್ಕಾರು ಶಾಲಾ ಬಳಿಯ ಇಬ್ರಾಹಿಂ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಿಗೆಯಲ್ಲಿ ಉರಿಯುತ್ತಿರುವ ಬೆಂಕಿ ಆಕಸ್ಮಿಕವಾಗಿ ಸಮೀಪದಲ್ಲಿದ್ದ ತೆಂಗಿನಕಾಯಿ ಸಿಪ್ಪೆಗೆ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಗೆ ಇಡೀ ಕೊಟ್ಟಿಗೆಗೆ ವ್ಯಾಪಿಸಿ ಹೊತ್ತಿ ಉರಿಯಲಾರಂಭಿಸಿತು. ಇದನ್ನು ಗಮನಿಸಿದ ಸ್ಥಳೀಯರಾದ ಇಕ್ಬಾಲ್ ಅಡ್ಕಾರು, ಇಬ್ರಾಹಿಂ ಅಡ್ಕಾರು ಹಾಗೂ ಇಬ್ರಾಹಿಂರವರ ಮಕ್ಕಳು ಸ್ಥಳೀಯರ ಸಹಕಾರದಿಂದ ನೀರು ಹಾಯಿಸಿ ಬೆಂಕಿ ನಂದಿಸಿದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ಕೂಡ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಸಹಕರಿಸಿದರು ಎಂದು ತಿಳಿದುಬಂದಿದೆ. ಮನೆಯ ಕೊಟ್ಟಿಗೆ ಬೆಂಕಿಗಾಹುತಿಯಾದ ಪರಿಣಾಮ ಸುಮಾರು ಒಂದು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಇಬ್ರಾಹಿಂರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.