ಮಂಗಳೂರು ತಾ| ಒಕ್ಕಲಿಗ ಯಾನೆ ಗೌಡರ ಯುವ ಘಟಕದ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು

Advt_Headding_Middle
Advt_Headding_Middle

ಮಂಗಳೂರು ತಾಲೂಕು ಒಕ್ಕಲಿಗ ಯಾನೆ ಗೌಡರ ಯುವ ಘಟಕ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆಯಾಗಿದ್ದಾರೆ.
ದ.ಕ ಜಿಲ್ಲಾ ಯುವ ಸಂಘ ಸ್ಥಾಪಿಸುವ ಸಲುವಾಗಿ ಮಂಗಳೂರಿನ ಲೇಡಿಹಿಲ್ ಚಿಲಿಂಬಿ ಗೌಡರ ಭವನದಲ್ಲಿ ಮಾ.೧೭ ರಂದು ಸಭೆ ನಡೆಸಲಾಯಿತು. ಮಂಗಳೂರು ಒಕ್ಕಲಿಗ ಗೌಡ ಸೇವಾ ಸಂಘದ ನಿರ್ದೇಶಕರು, ಅಧ್ಯಕ್ಷರುಗಳ ಸಮ್ಮುಖದಲ್ಲಿ ತಾಲೂಕು ಘಟಕದ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸುಮಾರು ೨೦೦ಕ್ಕಿಂತ ಅಧಿಕ ಯುವ ಉದ್ಯಮಿಗಳು, ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ವಿವಿಧ ತಾಲೂಕಿನ ಸದಸ್ಯರು ಭಾಗವಹಿಸಿದ್ದರು. ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಬೆಳ್ತಂಗಡಿ ಹಾಗೂ ಉಪಾಧ್ಯಕ್ಷರುಗಳಾಗಿ ವಿಜಯ್ ತುಂಗಪ್ಪ ಬೆಳ್ತಂಗಡಿ, ನಾಗೇಶ್ ಪುತ್ತೂರು, ಪ್ರಕಾಶ್ ಕೊಕ್ಕಡ, ಬಾನುಪ್ರಕಾಶ್ ಸುಳ್ಯ, ಶಾಂತಪ್ಪ ಮಂಗಳೂರು, ಯತೀಶ್ ಕಜ್ಜೋಡಿ ಸುಳ್ಯ, ಮತ್ತು ಸಂಘಟನಾ ಕಾರ್ಯದರ್ಶಿಗಳಾಗಿ ಸುಂದರ ಜಿ.ಹೆಚ್., ಚೇತನ್, ರಾಘವೇಂದ್ರ, ರಕ್ಷಿತ್ ಪುತ್ತಿಲ, ನಿತಿನ್ ಕೂಜುಗೋಡು, ಮಂಜು ರವರುಗಳನ್ನು ಆಯ್ಕೆಮಾಡಲಾಯಿತು. ಕೋಶಾಧಿಕಾರಿಯಾಗಿ ಚಂದ್ರಶೇಖರ, ಮಹಿಳಾ ಉಪಾಧ್ಯಕ್ಷರಾಗಿ ಹೇಮಲತ ಮತ್ತು ಬಬಿತಾರವರನ್ನು ಆಯ್ಕೆಗೊಳಿಸಲಾಯಿತು. ೩೫ ಜನ ನಿರ್ದೇಶಕರನ್ನು ಆಯ್ಕೆಗೊಳಿಸಲಾಗಿದ್ದು ಸುಳ್ಯ ತಾಲೂಕಿನ ಬಾನು ಪ್ರಕಾಶ್, ಯತೀಶ್ ಕಜ್ಜೋಡಿ, ಪುರುಷೋತ್ತಮ, ಅನಿಲ್ ನಾವೂರು, ಜಗನಾಥ್, ದಿನೇಂದ್ರ ಯು.ಎನ್, ಪದ್ಮನಾಭ ಮರ್ಕಂಜ, ಮಹೇಶ್ ಮೋಂಟಡ್ಕ, ಸತೀಶ್ ಮಡಪ್ಪಾಡಿ, ರೇಖಾ ತಂಟೆಪ್ಪಾಡಿ, ಮಹೇಶ್ ನಡುತೋಟ, ಬೆಳ್ತಂಗಡಿ ತಾಲೂಕಿನ ಪ್ರವೀಣ್, ಜಯ್ ತಂಗಪ್ಪ, ಸುಂದರ ಗೌಡ, ಗಣೇಶ್ ಗೌಡ ಕಲಾಯಿ, ಚೇತನ್ ಕುಮಾರ್ ಕೊಕ್ಕಡ, ಹರಿಚಂದ್ರ ಜೆಪ್ಪು, ಹೇಮಲತಾ ಕೆ ಪುತ್ತೂರು ತಾಲೂಕಿನ ನಾಗೇಶ್ ಕೆ ಗೌಡ, ಕಡಬ ತಾಲೂಕಿನ ಸಾಂತಪ್ಪ ಗೌಡ, ಚಂದ್ರಶೇಖರ, ರಕ್ಷಿತ್ ಗೌಡ ಪುತ್ತಿಲ, ನಿತಿನ್ ಕೂಜುಗೋಡು, ರಾಘವೇಂದ್ರ, ಕಿರಣ್ ಹೊಸಳಿಕೆ, ಸುನಿಲ್ ತೇನಡ್ಕ, ಮನೋಜ್, ಸುಧಾಕರ, ಅವಿನಾಶ್, ಬಬಿತಾ, ತಿರುಮಲೇಶ್ವರ ಬಂಟ್ವಾಳ ತಾಲೂಕಿನ ಶಿವಪ್ರಕಾಶ್, ಮಂಗಳೂರಿನ ಮಧುಸೂದನ್ ಗೌಡ, ಸಂದೀಪ್‌ರಾಜ್, ಅಶ್ವಥ್, ನವೀನ್ ಡಿ.ಎಸ್, ಸುಜಯ್ ಕುಮಾರ್, ಸಾಂತಪ್ಪ ಗೌಡ ಯು, ಚಂದ್ರಶೇಖರ ನಿದೆಶಕರುಗಳಾಗಿ ಆಯ್ಕೆಯಾಗಿದ್ದಾರೆ.
ಕಿರಣ್ ಬುಡ್ಲೆಗುತ್ತು ಅವರು ನಾಲ್ಕೂರು ಗ್ರಾಮದ ದೇವಿದಾಸ್ ಗೌಡ ಮತ್ತು ಪುಷ್ಪಾವತಿ ದಂಪತಿಗಳ ಪುತ್ರರಾಗಿದ್ದು ಸಿವಿಲ್ ಇಂಜಿನಿಯರ್. ಮಂಗಳೂರಿನಲ್ಲಿ ಉದ್ಯಮಿಯಾಗಿದ್ದು ಮೋಡ್ಯೂಲರ್ ಕಿಚನ್ ಎಂಡ್ ವಾರ್ಡ್‌ರೂಫ್ ಶೋರೂಂ ಹೊಂದಿರುತ್ತಾರೆ. ಈ ಸಭೆಯಲ್ಲಿ ಕೆಲ ನಿರ್ಧಾರಗಳನ್ನು ಕೈಗೊಂಡಿದ್ದು ೧೮ ರಿಂದ ೪೫ ವರ್ಷ ವಯಸ್ಸಿನವರನ್ನು ಗೌಡರ ಯುವ ಘಟಕದ ಸದಸ್ಯರಾಗಬಹುದಾಗಿ ತೀರ್ಮಾನಿಸಲಾಗಿದೆ. ೧೦೦೦ ಕ್ಕಿಂತ ಹೆಚ್ಚು ಸದಸ್ಯರುಗಳನ್ನು ನೇಮಿಸುವ ಮತ್ತು ಮುಂದಿನ ಸಭೆಯಲ್ಲಿ ಯುವ ಘಟಕದ ಕೆಲಸ ಕಾರ್ಯಗಳನ್ನು ಚರ್ಚಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯುವ ಘಟಕದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.