ಪೆರಾಜೆ : ಬಿಜೆಪಿಯ ಕಾರ್ಯಕರ್ತರ ಸಭೆ, ಸಂಸದ ಪ್ರತಾಪ್ ಸಿಂಹ ಭೇಟಿ

Advt_Headding_Middle
Advt_Headding_Middle

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಹಾಗೂ ಈ ಹಿಂದಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಪೆರಾಜೆ ಭೇಟಿ ಕಾರ್ಯಕ್ರಮ ಮಾ. ೧೯ರಂದು ನಡೆಯಿತು.


ಸಭೆಯಲ್ಲಿ ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯ ಮಂತ್ರಿಯಾದ ಮನೋಹರ್ ಪರಿಕ್ಕರ್ ಅವರ ನಿಧನಕ್ಕೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪೆರಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕಾರ್ಯಕರ್ತರ ಪರವಾಗಿ ಪೆರಾಜೆ ಗ್ರಾಮದ ಕೆಲವೊಂದು ಸಮಸ್ಯೆಗಳನ್ನು ಹೊನ್ನಪ್ಪ ಅಮೆಚೂರ್ ಮತ್ತು ಅಶೋಕ್ ಪೀಚೆಮನೆ ಅವರು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಪೂವಪ್ಪ ಮಾಸ್ತರ್ ದೊಡ್ಡಡ್ಕ, ಇಬ್ರಾಹಿಂ, ಕೃಷ್ಣ ದಾಸರ ಹಿತ್ತಿಲು ಸೇರಿದಂತೆ ಇನ್ನೂ ಅನೇಕರನ್ನು ಸಂಸದರು ಪಕ್ಷಕ್ಕೆ ಬರಮಾಡಿಕೊಂಡರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಪೆರಾಜೆ ಗ್ರಾಮವು ಈ ಹಿಂದಿನ ಅವದಿಯಲ್ಲಿ ಅಧಿಕ ಮತಗಳನ್ನು ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗ್ರಾಮವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇದೇ ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು. ಗ್ರಾಮದ ಪ್ರಮುಖ ಸಮಸ್ಯೆಗಳಾದ ಗ್ರಾಮದಲ್ಲಿ ಟವರ್ ಹಾಗೂ ’ಭಾಗಮಂಡಲ ಪಟ್ಟಿ ತೊಡಿಕಾನ ಪೆರಾಜೆ’ ಕಾವೇರಿ ರಸ್ತೆಯ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯ, ಜಿಲ್ಲಾ ಬಿ.ಜೆ.ಪಿ ಪ್ರಮುಖರಾದ ರವಿಕುಶಾಲಪ್ಪ, ತೆಕ್ಕಡೆ ಶೋಭ, ತಳೂರ್ ಕಿಶೋರ್ ಕುಮಾರ್, ಬಾಲಚಂದ್ರ ಕಳಗಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಮೋನಪ್ಪ ಕುಂಬಳಚೇರಿ, ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯ ನಾಯಕರು ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಹಾಜರಿದ್ದರು.
ಕಾರ್ಯಕ್ರಮವನ್ನು ಪೆರಾಜೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ಸ್ವಾಗತಿಸಿ, ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ನಿರೂಪಣೆಯೊಂದಿಗೆ ಪೆರಾಜೆ ಬಿ.ಜೆ.ಪಿ ಗ್ರಾಮಸಮಿತಿ ಅಧ್ಯಕ್ಷ ಮೋನಪ್ಪ ಕುಂಬಳಚೇರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.