ಡಿ.ಸಿ.ಸಿ. ಬ್ಯಾಂಕಿಗೆ ಮಾ.22 ರಂದು ಚುನಾವಣೆ : ದಂಬೆಕೋಡಿ V/S ದೇವರಾಜ್ ಕಣದಲ್ಲಿ, ಕುತ್ತಮೊಟ್ಟೆ, ಪುಡ್ಕಜೆ, ಸೇರ್ಕಜೆ ನಾಮಪತ್ರ ಹಿಂತೆಗೆತ

Advt_Headding_Middle
Advt_Headding_Middle

ದ.ಕ.ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಲಿ ನಿರ್ದೇ ಶಕರ ಸ್ಥಾನಕ್ಕೆ ಮಾ.೨೨ರಂದು ಚುನಾ ವಣೆ ನಡೆಯಲಿದೆ. ಸುಳ್ಯದಿಂದ ಬೈಂದೂರು ವರೆಗೆ ಅವಿಭಜಿತ ದ.ಕ.ಜಿಲ್ಲೆಯ ವ್ಯಾಪ್ತಿ ಹೊಂದಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ತಾಲೂಕುವಾರು ನಿರ್ದೇಶಕರ ಆಯ್ಕೆ ಆಗಬೇಕಾಗಿದೆ.
ಪ್ರತೀ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರತಿನಿಧಿಗಳು ಮತಹಾಕಿ ತಾಲೂಕಿನಿಂದ ಒಬ್ಬರನ್ನು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರನ್ನಾಗಿ ಆಯ್ಕೆ ಮಾಡುತ್ತಾರೆ. ಹಾಗೆ ಆಯ್ಕೆಯಾದ ತಾಲೂಕುವಾರು ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಈ ಬಾರಿಯ ಚುನಾವಣೆಗೆ ಸುಳ್ಯ ತಾಲೂಕಿನಲ್ಲಿ ಇಬ್ಬರು ಕಣದಲ್ಲಿದ್ದಾರೆ. ಕಳೆದ ೩ ಅವಧಿಗಳಿಂದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಕಾಂಗ್ರೆಸ್ ಬೆಂಬಲಿತ ಕೆ.ಎಸ್.ದೇವರಾಜ್ ರವರು ಒಬ್ಬರಾದರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಬೆಂಬಲಿತ ವೆಂಕಟ್ ದಂಬೆಕೋಡಿ ಇನ್ನೊಬ್ಬರು. ಸ್ಪರ್ಧಾಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬೆಳ್ಳಾರೆ ಸೊಸೈಟಿ ಅಧ್ಯಕ್ಷ ಪುಡ್ಕಜೆ ಗಂಗಾಧರ ರೈ ಹಾಗೂ ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಸುಳ್ಯ ತಾಲೂಕಿನಲ್ಲಿ ೨೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು ಈ ಪೈಕಿ ೧೬ರಲ್ಲಿ ಬಿಜೆಪಿ ಬೆಂಬಲಿತರು ಬಹುಮತ ಪಡೆದು ಆಡಳಿತ ನಡೆಸುತ್ತಿದ್ದಾರೆ. ೭ರಲ್ಲಿ ಕಾಂಗ್ರೆಸ್ಸಿಗರು ಆಡಳಿತ ನಡೆಸುತ್ತಿದ್ದಾರೆ. ಇವುಗಳಲ್ಲಿ ಪಂಬೆತ್ತಾಡಿ ಸೊಸೈಟಿ ಹೊರತು ಪಡಿಸಿ ಇತರ ಎಲ್ಲ ಕಡೆ ಅಧ್ಯಕ್ಷರುಗಳೇ ಡಿ.ಸಿ.ಸಿ. ಬ್ಯಾಂಕ್‌ಗೆ ಚುನಾವಣೆಗೆ ಮತ ಚಲಾಯಿಸಲು ಪ್ರತಿನಿಧಿತ್ವ ಪಡೆದುಕೊಂಡಿದ್ದಾರೆ. ಪಂಬೆತ್ತಾಡಿಯಲ್ಲಿ ಉಪಾಧ್ಯಕ್ಷ ಸಂತೋಷ್ ಜಾಕೆಯವರು ಪಡೆದಿದ್ದಾರೆ. ಅವರು ಈಗ ಬಿಜೆಪಿಯಲ್ಲಿರುವುದರಿಂದ ಬಿಜೆಪಿಯ ಬಲ ೧೭ ಆಗಿದೆ. ಕಾಂಗ್ರೆಸ್ ಬಲ ೬ ಆಗಿದೆ. ಆದ್ದರಿಂದ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ವೆಂಕಟ್ ದಂಬೆಕೋಡಿಯವರು ಗೆಲ್ಲುವ ಸಾಧ್ಯತೆ ಹೆಚ್ಚೆಂದು ನಂಬಲಾಗಿದೆ. ಆದರೆ ಈ ಚುನಾವಣೆ ಪಕ್ಷ, ಚಿಹ್ನೆಯ ಆಧಾರದಲ್ಲಿ ನಡೆಯದೆ, ಸಹಕಾರಿ ತತ್ವದ ಆಧಾರದಲ್ಲಿ ನಡೆಯುವುದರಿಂದ ಗೆಲ್ಲುವ ವಿಶ್ವಾಸವಿರಿಸಿಕೊಂಡು ಕೆ.ಎಸ್.ದೇವರಾಜರು ಸ್ಪರ್ಧೆ ಯನ್ನೊಡಿದ್ದಾರೆ.

ಬಿಜೆಪಿಯೊಳಗೆ ಅಸಮಾಧಾನ
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ವೆಂಕಟ್ ದಂಬೆಕೋಡಿಯವರನ್ನು ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಬಿಜೆಪಿ ಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಬಿಜೆಪಿ ಆಡಳಿತದ ಸೊಸೈಟಿ ಅಧ್ಯಕ್ಷರುಗಳಲ್ಲಿ ಹಲವರು ಮಾತನಾಡಿಕೊಂಡು ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಬೆಳ್ಳಾರೆಯ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ ನಾಮಪತ್ರ ಸಲ್ಲಿಸಿದ್ದರು.
ಇತ್ತೀಚೆಗಷ್ಟೆ ಎ.ಪಿ.ಎಂ.ಸಿ. ಅಧ್ಯಕ್ಷತೆಯನ್ನು ಸಂತೋಷ್ ಕುತ್ತಮೊಟ್ಟೆಯವರ ಕುಟುಂಬಿಕರಿಗೆ ನೀಡಿರುವುದರಿಂದ ಈಗ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸ್ಥಾನವನ್ನೂ ಕೇಳುವುದು ಸರಿಯಲ್ಲವೆಂದು ಪಕ್ಷದ ಕೆಲವು ಪ್ರಮುಖರು ಹೇಳತೊಡಗಿದ್ದರೆ, ವೆಂಕಟ್ ದಂಬೆಕೋಡಿಯವರಿಗೆ ಜಿಲ್ಲಾ ಪಂಚಾಐತ್ ಸದಸ್ಯತ್ವ ಕೊಡಲಾಗಿದೆ. ಈಗ ಅವರು ಟೆಲಿಕಾಂ ಸಲಹಾಸಮಿತಿ ಸದಸ್ಯರೂ ಆಗಿದ್ದಾರೆ. ಅವರಿಗೆ ಸಹಕಾರಿ ಕ್ಷೇತ್ರದ ಅನುಭವವೂ ಇಲ್ಲ. ಆದ್ದರಿಂದ ಬೇರೆಯವರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕತ್ವದ ಅವಕಾಶ ನೀಡಬೇಕಿತ್ತೆಂದು ಇನ್ನು ಕೆಲವು ಪ್ರಮುಖರು ಹೇಳ ತೊಡಗಿದ್ದರು.
’ದಂಬೆಕೋಡಿಯವರ ಅಭ್ಯರ್ಥಿತನ ಈಗಾಗಲೇ ತಿರ್ಮಾನಗೊಂಡಿರುವುದರಿಂದ ನೀವು ನಾಮಪತ್ರ ಹಿಂತೆಗೆದುಕೊಳ್ಳಬೇಕೆಂದು’ ಸಂಘಟನೆಗಳ ಪ್ರಮುಖರು ಹೇಳಿದ್ದರಿಂದ ಸಂತೋಷ್ ಕುತ್ತಮೊಟ್ಟೆ ಹಾಗೂ ಗಂಗಾಧರ ರೈಯವರು ಮಾ.೧೭ರಂದು ಮಂಗಳೂರಿಗೆ ಹೋಗಿ ನಾಮಪತ್ರ ಹಿಂತೆಗೆದುಕೊಂಡರು. ಪಕ್ಷದ ಸೂಚನೆಯ ಮೇರೆಗೆ ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದ್ದ ಬಾಲಗೋಪಾಲ ಸೇರ್ಕಜೆಯವರು ಮೊದಲೇ ನಾಮಪತ್ರ ಹಿಂತೆಗೆದುಕೊಂಡಿದ್ದರು.
“ನಾವು ಬಂಡಾಯವಾಗಿ ನಾಮಪತ್ರ ಸಲ್ಲಿಸಿರಲಿಲ್ಲ. ಅವಕಾಶವಿದ್ದುದರಿಂದ ಸಹಜವಾಗಿ ನಾಮಪತ್ರ ಸಲ್ಲಿಸಿದ್ದೆವು. ಪಕ್ಷದ ವರಿಷ್ಠರ ನಿರ್ಧಾರವನ್ನು ಒಪ್ಪಿ ಹಿಂಪಡೆದಿzವೆ. ನಾವೆಂದೂ ಪಕ್ಷದ ವಿರುದ್ಧ ಹೋಗುವವರಲ್ಲ’‘ ಎಂದು ಸಂತೋಷ್ ಕುತ್ತಮೊಟ್ಟೆ ’ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ. “ಸಂತೋಷ್ ಕುತ್ತಮೊಟ್ಟೆ ಮತ್ತಿತರರು ಯಾಕೆ ನಾಮಪತ್ರ ಸಲ್ಲಿಸಿದ್ದಾರೆಂದು ನನಗೆ ಗೊತ್ತಿಲ್ಲ. ನನಗೆ ಪಕ್ಷ ಸೂಚನೆ ಕೊಟ್ಟ ಮೇರೆಗೆ ನಾಮಪತ್ರ ಸಲ್ಲಿಸಿzನೆ“ ಎಂದು ವೆಂಕಟ್ ದಂಬೆಕೋಡಿ ಪ್ರತಿಕ್ರಿಯೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.