Breaking News

ವನ್ಯಜೀವಿಗಳ ಉಳಿವೇ ಪರಿಸರದ ಉಳಿವು : ಡಾ. ಚಂದ್ರಶೇಖರ ದಾಮ್ಲೆ

Advt_Headding_Middle
Advt_Headding_Middle

 

ಎಲ್ಲ ಪ್ರಾಣಿಗಳನ್ನೂ ಪ್ರಕೃತಿಯನ್ನೂ ನಾವು ಪ್ರೀತಿಸಬೇಕು. ಜಲ, ನೆಲ, ಸಸ್ಯ ಸಂಕುಲದ ಉಳಿಸುವಿಕೆಯ ಮೂಲಕ ಮಾನವನ ಉಸಿರನ್ನು ಉಳಿಸಲು ಸಾಧ್ಯ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.

ಅವರು ಮಾ. ೧೮ರಂದು ಸ್ನೇಹ ಶಾಲೆ ಹಾಗೂ ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ ಸುಳ್ಯ ವಲಯದ ವತಿಯಿಂದ ಜಂಟಿಯಾಗಿ ಜರಗಿದ ವನ್ಯ ಜೀವಿಗಳ ಉಳಿವಿಗಾಗಿ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಲಯಾರಣ್ಯ ಅಧಿಕಾರಿ ಮಂಜುನಾಥ ಎನ್ ರವರು ಮಾತನಾಡಿ ಪರಿಸರದ ಸಂರಕ್ಷಣೆಯ ಮಹತ್ವ ಮತ್ತು ಉದ್ದೇಶದ ಕುರಿತು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿದರು. ಪರಿಸರ ಸಂಘದ ನಿರ್ದೇಶಕ ರಘುರಾಮ ಭಟ್ ಸಿ. ಉಪಸ್ಥಿತರಿದ್ದರು. ದೃಶ್ಯ ಮಾಧ್ಯಮ ಬಳಸಿ ಕಾರ್ಯಾಗಾರವನ್ನು ಭುವನೇಶ್ ಸುಬ್ರಹ್ಮಣ್ಯರವರು ನಡೆಸಿಕೊಟ್ಟರು. ಸಹ ಶಿಕ್ಷಕಿ ಶ್ರೀಮತಿ ಜಯಂತಿ ಕೆ ವಂದಿಸಿದ ಈ ಕಾರ್ಯಕ್ರಮವನ್ನು ಸಹಶಿಕ್ಷಕ ದೇವಿಪ್ರಸಾದ್ ಜಿ.ಸಿ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.