Breaking News

ಬಾಳಿಲ : ಮಿನ್ನತುಲ್ ಹುದಾ ಮಹಾ ಸಭೆ , ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

ಪರಸ್ಪರ ಪ್ರೀತಿ ವಿಶ್ವಾಸ ದಿಂದ ಬಾಳಿದರೆ ಸಾರ್ಥಕ ಜೀವನ : ಹನೀಫ್ ಸಾಹೇಬ್ ಪಾಜಪಳ್ಳ

ಅತ್ತಿಕರ ಮಜಲು ಪಾಜಪಳ್ಳ ಜುಮಾ ಮಸೀದಿ ಅಧೀನದಲ್ಲಿರುವ ಮಿನ್ನತುಲ್ ಹುದಾ ಇದರ ಮಹಾಸಭೆಯು ಮಾ.೧೩ ರಂದು ಮದರಸ ಸಭಾಂಗಣದಲ್ಲಿ ನಡೆಯಿತು.

ಕೆ ಪಿ ಯೂಸುಫ್ ಮುಸ್ಲಿಯಾರ್ ದುಅಃ ಕೆ ನೇತೃತ್ವವನ್ನು ನೀಡಿದರು.

ಸಭೆಯನ್ನು ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ಉದ್ಘಾಟಿಸಿ ಮಾತನಾಡಿ ,ನೆಮ್ಮದಿಯಿಂದ ಬಾಳಿ ಬದುಕಿ ಪರಸ್ಪರ ಎಲ್ಲರೊಂದಿಗೂ ಪ್ರೀತಿ ವಿಶ್ವಾಸ ದಿಂದ ಇದ್ದು ,ಇತರರಿಗೆ ಮಾದರಿಯಾಗಿ ಬದುಕಿದರೆ ಸಾರ್ಥಕತೆ ಜೀವನ ಕಾಣಲು ಸಾಧ್ಯ ವಾಗಿದೆ .ಸಮುದಾಯ ಸೇವೆ ಹಾಗೂ ಸಮಾಜ ಸೇವೆ ನಮ್ಮ ಹಕ್ಕಾಗಿರುತ್ತದೆ ಎಂದು ಪ್ರತಿಯೊಬ್ಬರು ಅರಿತಿರಬೇಕೆಂದವರು ಹೇಳಿದರು.

ಬಳಿಕ ಸಾಮಾಜಿಕ ಚಿಂತಕ ಕೆ ಎಂ ಇಕ್ಬಾಲ್ ಬಾಳಿಲ ತರಬೇತಿ ಯನ್ನು ನೀಡಿ ,ಸಂಘಟನೆ ಯ ಜವಾಬ್ದಾರಿ ಯ ಬಗ್ಗೆ ಮಾಹಿತಿ ಯನ್ನು ನೀಡಿದರು .

ಕಾರ್ಯ ಕ್ರಮದ ಅಧ್ಯಕ್ಷ ತೆಯನ್ನು ಆಸಿಫ್ ಭಾರತ್ ವಹಿಸಿದ್ದರು.

ಸಭೆಯಲ್ಲಿ ಈ ಹಿಂದಿನ ಅಧ್ಯಕ್ಷ ಹಾಗೂ ಕಾರ್ಯ ದರ್ಶಿಯನ್ನು ಶಾಲುಹೊದಿಸಿ ಗೌರವಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶರೀಫ್ ಫ್ರಂಟ್ ಲೈನ್ ,ಪ್ರಧಾನ ಕಾರ್ಯ ದರ್ಶಿಯಾಗಿ ಫಾರೂಖ್ ಬಾಳಿಲ ,ಉಪಾಧ್ಯಕ್ಷ ರಾಗಿ ಶರೀಫ್ ಅತ್ತಿಕರಮಜಲು ,ಅಝೀಝ್ ಅಯ್ಯನಕಟ್ಟೆ ಆಯ್ಕೆ ಗೊಂಡರು.

ಸಮಿತಿಯ ಗೌರವಾಧ್ಯಕ್ಷ ರಾಗಿ ಕೆ ಎಂ ಇಕ್ಬಾಲ್ ಬಾಳಿಲ ಆಯ್ಕೆ ಗೊಂಡರು .

ಸಮಿತಿಯ ವರ್ಕಿಂಗ್ ಕಾರ್ಯ ದರ್ಶಿಯಾಗಿ ಖಲೀಲ್ ಅಯ್ಯನಕಟ್ಟೆ , ಜೊತೆ ಕಾರ್ಯ ದರ್ಶಿಗಳಾಗಿ ಆಸಿಫ್ ಭಾರತ್ , ಸಂಶುದ್ದೀನ್ ಪಳ್ಳತ್ತಡ್ಕ , ಕೋಶಾಧಿಕಾರಿ ಯಾಗಿ ನೌಶಾದ್ ಬಾಳಿಲ ,ವರ್ಕಿಂಗ್ ಸಮಿತಿಯ ಸದಸ್ಯರಾಗಿ ಕರೀಂ ಏನೆಕಲ್ಲು , ಅಶ್ರಫ್ ಜಿ ಎಮ್ ಗೋಳ್ತಡ್ಕ ,ಅಬ್ದುಲ್ ರಝಾಕ್ ಅತ್ತಿಕರಮಜಲು ,ರಫೀಖ್ ಸಾಹೇಬ್ ಹಾಗೂ ಕ್ಯಾಂಪಸ್ ರೈಟ್ ನಾಯಕರಾಗಿ ಆಸೀಫ್ ದೇರಂಪಾಲು ,ಅಫ್ರಾನ್ ಪಟ್ಟೆ ,ರಿಝ್ವಾನ್ ಬಾಳಿಲ ಆಯ್ಕೆ ಗೊಂಡರು .

ಮಸೀದಿಯ ಪ್ರಧಾನ ಕಾರ್ಯ ದರ್ಶಿ ಖಲೀಲ್ ಅಯ್ಯನಕಟ್ಟೆ ಹಾಗೂ ಸುಲೈಮಾನ್ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ರಿಝ್ವಾನ್ ಬಾಳಿಲ ಹಿಂದಿನ ವರ್ಷದ ವರದಿ ವಾಚಿಸಿದರು.ಫಾರೂಖ್ ಬಾಳಿಲ ಸ್ವಾಗತಿಸಿ,ಪ್ರತಿಜ್ಞಾ ವಿಧಿ ಬೋಧಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.