Breaking News

ಬಿಜೆಪಿ ನಾಯಕ ಕಳಗಿ ಬಾಲಚಂದ್ರರವರು ಅಪಘಾತದಲ್ಲಿ ದುರ್ಮರಣ

Advt_Headding_Middle
Advt_Headding_Middle


ಇಂದು ಸಂಜೆ ಮಡಿಕೇರಿಯಿಂದ ಸಂಪಾಜೆ ಕಡೆಗೆ ಕಾರಲ್ಲಿ ಹೊರಟಿದ್ದ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಅವರಿದ್ದ ಕಾರಿಗೆ ಲಾರಿಯೊಂದು ಢಿಕ್ಕಿಯಾದ ಪರಿಣಾಮವಾಗಿ ಬಾಲಚಂದ್ರ ಕಳಗಿ ಅವರು ತೀವ್ರ ಜಖಂಗೊಂಡು  ಮೃತ್ಯುವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.

ಸಂಪಾಜೆ ಗ್ರಾ.ಪಂ. ಮಾಜಿ  ಅಧ್ಯಕ್ಷ,  ಪಯಸ್ವಿನಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಬಾಲಚಂದ್ರವರು ಚುನಾವಣೆ ನಿಮಿತ್ತ ಸಮಾಲೋಚನೆಗಾಗಿ ಇಂದು ಮಡಿಕೇರಿಗೆ ಹೋಗಿದ್ದರು.

ಇಂದು ಸಂಜೆ ಅವರು ಮಡಿಕೇರಿಯಿಂದ ಕಾರಲ್ಲಿ ಹಿಂದಿರುಗುತ್ತಿರುವಾಗ ಮೇಕೇರಿ ಬಳಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿಗೆ ಗುದ್ದಿತೆನ್ನಲಾಗಿದೆ.


ಪರಿಣಾಮವಾಗಿ ಬಾಲಚಂದ್ರರು ತೀವ್ರವಾಗಿ ಜಖಂಗೊಂಡು ಅವರನ್ನು ತಕ್ಷಣ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ ಕೆಲವೇ ನಿಮಿಷಗಳಲ್ಲಿ ಅವರು ಕೊನೆಯುಸಿರೆಳೆದರೆನ್ನಲಾಗಿದೆ.


ಸಂಪಾಜೆ ಪರಿಸರದ ಭರವಸೆಯ ನಾಯಕರಾಗಿದ್ದ ಕಳಗಿ ಬಾಲಚಂದ್ರ ಅವರ ಅಪಘಾತದ ಸುದ್ದಿ ತಿಳಿದು  ಪಕ್ಷದ ಕಾರ್ಯಕರ್ತರು ಬಂಧುಗಳು ಮತ್ತು ಹಿತೈಷಿಗಳು ತೀವ್ರ ಆಘಾತಕ್ಕೊಳಗಾಗಿದ್ದು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.