Breaking News

ಪಂಜ:ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭ ಲಯನ್ಸ್ ಜಾಗತಿಕ ಮಾದರಿ ಸೇವಾ ಸಂಸ್ಥೆ : ದೇವದಾಸ್ ಭಂಡಾರಿ

Advt_Headding_Middle
Advt_Headding_Middle

 

ಲಯನ್ಸ್ ಸಂಸ್ಥೆಯು ಸಮಾಜದಲ್ಲಿ ಬಡ ಜನರ ಬಗ್ಗೆ ಕಾಳಜಿ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾ ನಿಸ್ವಾರ್ಥ ಸೇವೆಯನ್ನು ನೀಡುತ್ತಿದೆ.ನೈಜ ಕೃಷಿ ಚಟುವಟಿಗಳನ್ನು ಉಳಿಸಿಸುವ ಕಾರ್‍ಯಕ್ರಮ , ಹೀಗೆ ಅನೇಕ ಸಾಮಾಜಿಕ ಸೇವೆಯಿಂದ ಜನ ಮಾನಸದ ಮಧ್ಯೆ ಜಾಗತಿಕವಾಗಿ ಬೆಳೆದ ಮಾದರಿ ಸೇವಾ ಸಂಸ್ಥೆಯಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಹೇಳಿದರು. ಅವರು ಮಾ.೧೯.ರಂದು.ಪಂಜ ವಿ.ಕೆ.ರೆಸಿಡೆನ್ಸಿ ಸಭಾಭವನದಲ್ಲಿ ಜರುಗಿದ ಪಂಜ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿದರು.


ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ತುಕಾರಾಮ ಏನೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಮಾಧವ ಗೌಡ ಜಾಕೆ, ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಸುಖಲತಾ ದೇವದಾಸ್ ಭಂಡಾರಿ ,ದ್ವಿತೀಯ ಗವರ್ನರ್ ಡಾ.ಗೀತಪ್ರಕಾಶ್, ವಲಯಾಧ್ಯಕ್ಷ ಅರವಿಂದ ಭಗವನ್, ಜಿ ಆರ್ ಆರ್ ಸುದರ್ಶನ್ ಪಡಿಯಾರ್, ಪ್ರಾಂತೀಯ ಪ್ರತಿನಿಧಿ ನಳಿನ್ ಕುಮಾರ್ ಕೋಡ್ತುಗುಳಿ. ಹಾಗೂ ಐ ಪಿ ಪಿ ಬಾಲಕೃಷ್ಣ ಗೌಡ ಮೂಲೆಮನೆ, ಕಾರ್ಯದರ್ಶಿ ಮಹಾಬಲ ಕುಳ, ಕೋಶಾಧ್ಯಕ್ಷ ಸುಚಿನ್ನಾ ಕಾಣಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಲಬ್‌ನ ವತಿಯಿಂದ ಪಂಜ ಜೂನಿಯರ್ ಕಾಲೇಜಿಗೆ ವಿಜಯ ವೇದಿಕೆ ಮತ್ತು ಚಿಕಿತ್ಸೆಗಾಗಿ ಕುಟುಂಬವೊಂದಕ್ಕೆ ನೆರವು ನೀಡಲಾಯಿತು.
ಸನ್ಮಾನ : ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಗೈಯುತ್ತಿರುವ ವೈಧ್ಯ ಡಾ.ಮಂಜುನಾಥ, ರಾಷ್ಟ್ರಮಟ್ಟದಲ್ಲಿ ಯೋಗ ದಲ್ಲಿ ಸಾಧನೆಗೈದ ಪ್ರಣಮ್ಯ, ಲಯನ್ ಜಾಗತಿಕ ಮಟ್ಟದ ಫೀಸ್ ಪೋಸ್ಟ್‌ರ್ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬ್‌ನ್ನು ಪ್ರತಿನಿಧಿಸಿ ಮಲ್ಟಿಪಲ್ ಅತ್ಯುತ್ತಮ ಪ್ರಶಸ್ತಿ ಪಡೆದ ವಿದ್ಯಾರ್ಥಿ ವಿಕಾಸ್ ಕೆ ಎಸ್.ಮತ್ತು ವಿಕಾಸ್ ಗೆ ಸೂಕ್ತ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಅವರನ್ನು ಸನ್ಮಾನಿಸಲಾಯಿತು.ಇಧೇ ವೇಳೆ ಗವರ್ನರ್ ದೇವದಾಸ್ ಭಂಡಾರಿ ಮತ್ತು ಸುಖಲತಾ ದೇವದಾಸ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಣಮ್ಯ ರವರಿಂದ ಯೋಗ ಪ್ರದರ್ಶನ ಜರುಗಿತು.
ಪ್ರಮಾಣ ವಚನ: ನೂತನ ಸದಸ್ಯರಾಗಿ ಸೇರ್ಪಗೆ ಗೊಂಡ ಲೀಲಾ ಮಾಧವ ಗೌಡ ಜಾಕೆ, ಕಾರ್‍ಯಪ್ಪ ಗೌಡ ಚಿದ್ಗಲ್ಲು, ಪುರುಷೋತ್ತಮ ದಂಬೆಕೋಡಿ, ಕುಮಾರ ಸ್ವಾಮಿ ಕಿನ್ನಿಕುಮೇರಿ, ಪುರಂದರ ಅವರಿಗೆ ಗವರ್ನರ್ ದೇವದಾಸ್ ಭಂಡಾರಿ ಪ್ರಮಾಣ ವಚನ ಭೋದಿಸಿದರು.
ಕಾರ್‍ಯಕ್ರಮದಲ್ಲಿ ತುಕಾರಮ ಏನೆಕಲ್ಲು ಸ್ವಾಗತಿಸಿದರು.ಮಹಾಬಲ ಕುಳ ವರದಿ ವಾಚಿಸಿದರು.ಬಾಲಕೃಷ್ಣ ಕುದ್ವ, ನೇಮಿರಾಜ ಪಲ್ಲೋಡಿ, ಶಶಿಧರ ಪಳಂಗಾಯ, ಸುರೇಶ್ ಕುಮಾರ್ ನಡ್ಕ,ಡಾ.ಪ್ರಕಾಶ್ ಡಿಸೋಜ ಅತಿಥಿಗಳ ಮತ್ತು ಸನ್ಮಾನಿತರ ಸಭೆಗೆ ಪರಿಚಾಯಿಸಿದರು. ಸುಚಿನ್ನ ಕಾಣಿಕೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.