HomePage_Banner
HomePage_Banner
HomePage_Banner

ಕನಕಮಜಲು ಯುವಕ ಮಂಡಲದ ವತಿಯಿಂದ ಮುಕ್ತ ಕೇರಂ ಪಂದ್ಯಾಟ

ಕನಕಮಜಲಿನ ಯುವಜನ ವಿಕಾಸ ಕೇಂದ್ರ, ಯುವಕ ಮಂಡಲದ ವತಿಯಿಂದ ಮುಕ್ತ ಡಬಲ್ಸ್ ಹಾಗೂ ಸಿಂಗಲ್ಸ್ ಕೇರಂ ಪಂದ್ಯಾಟವು ಕನಕಮಜಲಿನ ಶ್ರೀ ಆತ್ಮಾರಾಮ ಸಭಾಭವನದಲ್ಲಿ ಮಾ. 17 ರಂದು ಜರುಗಿತು.


ಕೇರಂ ಪಂದ್ಯಾವಳಿಯನ್ನು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ಪೂಜಾರಿಮನೆ, ಮಹಮ್ಮದ್ ರಫೀಕ್ ಕೆ.ಎ, ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಮಾಣಿಕೋಡಿ, ಕಾರ್ಯದರ್ಶಿ ರಕ್ಷಿತ್ ಅಕ್ಕಿಮಲೆ, ಕ್ರೀಡಾ ಕಾರ್ಯದರ್ಶಿ ಬಾಲಚಂದ್ರ ನೆಡಿಲು,ಕಾರ್ಯಕ್ರಮ ಸಂಯೋಜಕರಾದ ಸಂದೀಪ್ ಉಗ್ಗಮೂಲೆ, ಕಾರ್ಯಕ್ರಮ ನಿರೂಪಕ ಜಯಪ್ರಸಾದ್ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಮೋಹನ್ ಮಾಸ್ತರ್ ಸಾರಕೂಟೇಲು ಅಧ್ಯಕ್ಷತೆ ವಹಿಸಿದ್ದರು. ಮಹೇಂದ್ರ ಕನಕಮಜಲು ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಸಚಿನ್ ಮಾಣಿಕೋಡಿ ಉಪಸ್ಥಿತರಿದ್ದರು. ಡಬಲ್ಸ್ ಕೇರಂ ಪಂದ್ಯಾಟದಲ್ಲಿ ಎ.ಆರ್.ಕನಕಮಜಲು ತಂಡ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಫ್ರೆಂಡ್ಸ್ ಅಡ್ತಲೆ , ತೃತೀಯ ಬಹುಮಾನವನ್ನು ಶಿವಾಜಿ ಬಂದಡ್ಕ ಪಡೆದುಕೊಂಡರು. ಸಿಂಗಲ್ಸ್ ನಲ್ಲಿ ದಾಮೋದರ ಕನಕಮಜಲು ಪ್ರಥಮ ಹಾಗೂ ಯತೀಶ್ ಪಾಲಾರ್ ದ್ವಿತೀಯ ಬಹುಮಾನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.