HomePage_Banner
HomePage_Banner
Breaking News

ಶ್ರೀ ಎಡಮಲೆ ಇರ್‍ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಐವರ್ನಾಡು ಗ್ರಾಮದ ದೇವರಕಾನ ಪೇರಡ್ಕ-ಮಾಡ ಶ್ರೀ ಎಡಮಲೆ ಇರ್‍ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು 19 ರಂದು ವಿಜೃಂಭಣೆಯಿಂದ ನಡೆಯಿತು.


ಮಾ.12  ರಂದು ಬೆಳಿಗ್ಗೆ ಗೊನೆ ಕಡಿಯಲಾಯಿತು. ಮಾ.18 ರಂದು ಬೆಳಿಗ್ಗೆ ಸ್ಥಳ ಶುದ್ಧಿ, ಆಯುಧ ಶುದ್ಧಿ, ತಂಬಿಲ ಸೇವೆ ನಡೆದು, ಸಂಜೆ ನೂಜಾಲು ಮಾಳ್ಯದಿಂದ ಭಂಡಾರ ತೆಗೆಯಲಾಯಿತು. ರಾತ್ರಿ ಮುಡಿಯಾಗಿ ಪಲಯ ನೇಮ ನಡಾವಳಿ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗಂಟೆ 7-೦೦ ರಿಂದ 8-೦೦ ರ ತನಕ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಹಾಗೂ ಸ.ಉ.ಹಿ.ಪ್ರಾ.ಶಾಲೆ ದೇವರಕಾನ ಇದರ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.


ರಾತ್ರಿ ಗಂಟೆ 9.೦೦ ರಿಂದ 10 ರತನಕ ಧಾರ್ಮಿಕ ಉಪನ್ಯಾಸ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಇವರಿಂದ ನಡೆಯಿತು. ನಂತರ ರಂಗಭೂಮಿ ಬಿ.ಸಿ.ರೋಡ್ ಅಭಿನಯದ ತುಳು ಹಾಸ್ಯಮಯ ನಾಟಕ “ಸೇಲೆ ಸುಂದರೆ” ನಡೆಯಿತು.
ಮಾ. 19 ರಂದು ಬೆಳಿಗ್ಗೆ ಗಂಟೆ 8.೦೦ ಕ್ಕೆ ಮೆಗ್ಯ ನೇಮ ನಡಾವಳಿ ನಡೆಯಿತು. ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ ನಡೆಯಿತು. ನಂತರ ನಾಯರ್ ದೈವದ ನೇಮ ಮದ್ಯಾಹ್ನ ಪುರುಷ ದೈವದ ಮತ್ತು ಇತರ ದೈವದ ಕೋಲ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವದ ಭಂಡಾರವನ್ನು ನೂಜಾಲು ಮಾಲ್ಯಕ್ಕೆ ಸಾಗಿಸಲಾಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಮತ್ತು ಸದಸ್ಯರು, ನಾಲ್ಕು ಮನೆ ಆಡಳಿತದಾರರಾದ ಕುಳ್ಳಂಪಾಡಿ ಎಲ್ಯಣ್ಣ ಗೌಡ, ಎಡಮಲೆ ಗುರುಪ್ರಸಾದ್, ಕೀಲಾಡಿ ರಾಮಚಂದ್ರ ಗೌಡ, ಮಿತ್ತಮೂಲೆ ದಾಮೋದರ ಗೌಡ, ಆಡಳ್ತೆದಾರರಾದ ಆರಿಕಲ್ಲು ಗಿರಿಧರ ಗೌಡ, ಬಿರ್ಮುಕಜೆ ಗಂಗಾಧರ ಗೌಡ, ಕುಳ್ಳಂಪಾಡಿ ನೀಲಪ್ಪ ಗೌಡ, ಮಿತ್ತಮೂಲೆ ಮೋನಪ್ಪ ಗೌಡ, ಕತ್ಲಡ್ಕ ಜಯರಾಮ ಗೌಡ, ಸಾರಕೆರೆ ರುಕ್ಮಯ್ಯ ಪೂಜಾರಿ, ಶಾಂತಿಮೂಲೆ ಪುರಂದರ ನಾಯ್ಕ ಹಾಗೂ ಸಾವಿರಾರು ಮಂದಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.