ದುಗಲಡ್ಕ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle

ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಶ್ರೀ ದುಗ್ಗಲಾಯ, ರುಧಿರ ಚಾಮುಂಡಿ, ನಾಗದೇವರು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ವು ಮಾ ೧೯ ಮತ್ತು ೨೦ ರಂದು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗ ದರ್ಶನದಲ್ಲಿ , ಜೋಗಿಯಡ್ಕ ರಾಧಾಕೃಷ್ಣ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮಾ.೧೯ರಂದು ಬೆಳಿಗ್ಗೆ ಗಣಪತಿ ಹವನ, ನಾಗದೇವರಿಗೆ ತಂಬಿಲ, ಚಾಮುಂಡಿ ಪರಿವಾರ ದೈವಗಳ ತಂಬಿಲ ಹಾಗೂ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ನಡೆಯಿತು. ಸಂಜೆ ನಡುಬೆಟ್ಟು ಚಾವಡಿಯಿಂದ ದುಗಲಡ್ಕ ಮೂಲಸ್ಥಾನಕ್ಕೆ ದೈವಗಳ ಭಂಡಾರ ಬಂದು ರಾತ್ರಿ ರುಧಿರ ಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಬಳಿಕ ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಿತು. ೮ಕ್ಕೆ ಧಾರ್ಮಿಕ ಉಪನ್ಯಾಸ ಕಾರ್ಯ ಕ್ರಮದಲ್ಲಿ ಉಪನ್ಯಾಸಕರಾದ ಪೂರ್ಣ ಆತ್ಮರಾಮ ಧಾರ್ಮಿಕ ಉಪನ್ಯಾಸ ನೀಡಿದರು. ರಾತ್ರಿ ಶ್ರೀ ಕೊದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಮಾಯಾ ವಿಹಾರಿ ಯಕ್ಷಗಾನ ಬಯಲಾಟ ನಡೆಯಿತು.
ಮಾ ೨೦ ರಂದು ಬೆಳಿಗ್ಗೆ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೆಸರ ರಾಘವೇಂದ್ರ ಭಟ್ ಕಲ್ದಂಬೆ, ಸತ್ಯನಾರಾಯಣ ಕೊಳತ್ತಾಯ, ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಗೌರವಾಧ್ಯಕ್ಷ ಸುಂದರ್ ರಾವ್, ಉಪಾಧ್ಯಕ್ಷ ಯತೀಶ್ ರೈ, ಸಮಿತಿಯ ಪದಾಧಿಕಾರಿಗಳಾದ ಕುಶಾಲಪ್ಪ ಗೌಡ ಕಜೆ, ನಾರಾಯಣ ಮಣಿಯಾಣಿ, ಪ್ರಭಾವತಿ ರೈ, ನಾರಾಯಣ ನಾಯ್ಕ, ದಿನೇಶ್ ಡಿ.ಕೆ, ಬಾಲಕೃಷ್ಣ ರೈ ದುಗಲಡ್ಕ, ಗೋಪಾಲ ಈಶ್ವರಡ್ಕ, ಧನಂಜಯ (ಮನು)ದುಗಲಡ್ಕ, ರವಿಚಂದ್ರ ಈಶ್ವರಡ್ಕ, ಶಿವಪ್ರಸಾದ್ ಕುದ್ಪಾಜೆ ಹಾಗೂ ಸಮಿತಿಯ ಸದಸ್ಯರು, ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.