HomePage_Banner
HomePage_Banner

ತಾಲೂಕಿನ ಅನುದಾನಿತ ಶಾಲೆಗಳಲ್ಲಿ ಮಾತ್ರ ಆರ್.ಟಿ.ಇ. ಸೀಟು – ಅನುದಾನ ರಹಿತ ಶಾಲೆಗಳಲ್ಲಿ ಈ ಬಾರಿ ಆರ್.ಟಿ.ಇ. ಇಲ್ಲ

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಈ ಬಾರಿ ತಾಲೂಕಿನ 5 ಅನುದಾನಿತ ಶಾಲೆಗಳಲ್ಲಿ ಮಾತ್ರ ಪ್ರವೇಶ ನೀಡಲಾಗಿದ್ದು 5ಶಾಲೆಗಳಲ್ಲಿ 26 ಸೀಟುಗಳಿವೆ. ಈ ಹಿಂದೆ ಅನುದಾನ ರಹಿತ ಶಾಲೆಗಳಲ್ಲಿಯೂ ಶೇ. 25 ರಷ್ಟು ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ತಾಲೂಕಿನಲ್ಲಿ ಅನುದಾನ ರಹಿತ ಶಾಲೆಗಳಲ್ಲಿ ಆರ್.ಟಿ.ಇ. ಯೋಜನೆಯಡಿ ಉಚಿತ ಸೀಟು ಸಿಗುವುದಿಲ್ಲ.
ಸರಕಾರ ಆರ್.ಟಿ.ಇ. ಯೋಜನೆಗೆ ತಿದ್ದುಪಡಿ ತಂದಿದ್ದು ವಾರ್ಡ್‌ಗಳಲ್ಲಿ ಸರಕಾರಿ ಶಾಲೆ ಇದ್ದಲ್ಲಿ ಅದೇ ವಾರ್ಡಿನಲ್ಲಿ ಅನುದಾನ ರಹಿತ ಶಾಲೆಯಿದ್ದರೆ ಆರ್.ಟಿ.ಇ. ಯೋಜನೆ ಬಯಸುವವರು ಆ ವಾರ್ಡಿನಲ್ಲಿರುವ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು.
ಆರ್.ಟಿ.ಇ. ಅಡಿಯಲ್ಲಿ ಅನುದಾನ ರಹಿತ ಶಾಲೆಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಸುಳ್ಯ ನಗರದ ಎಲ್ಲಾ ವಾರ್ಡಗಳನ್ನು ಸೇರಿಸಿ ಆರ್.ಟಿ.ಇ. ಅಡಿಯಲ್ಲಿ ಒಂದು ವಾರ್ಡ್ ಎಂದು ಗುರುತಿಸಿರುವುದ್ದರಿಂದ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಸಿಗುವುದಿಲ್ಲ. ಆದರೆ ಅನುದಾನಿತ ಶಾಲೆಗಳಿಗೆ ಇದರಲ್ಲಿ ರಿಯಾಯಿತಿ ನೀಡಲಾಗಿದ್ದು ಅಲ್ಲಿಗೆ ಆರ್.ಟಿ.ಇ. ಯೋಜನೆ ಅನ್ವಯಿಸುತ್ತದೆ.

ತಾಲೂಕಿನಲ್ಲಿ ೫ ಶಾಲೆ: ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಒಂದನೇ ತರಗತಿಗಳಿಗೆ 2 ಸೀಟುಗಳು ಆರ್.ಟಿ.ಇ. ಯೋಜನೆಯಲ್ಲಿ ನೀಡಲಾಗಿದೆ.
ಈ ವಿದ್ಯಾಸಂಸ್ಥೆ ಅನುದಾನಿತ ವಿದ್ಯಾಸಂಸ್ಥೆಯಾಗಿದೆ. ಉಳಿದಂತೆ ಬಾಳಿಲ ವಿದ್ಯಾಭೋದಿನಿ ಪ್ರಾಥಮಿಕ ಶಾಲೆ 7 ಸೀಟು, ಜಾಲ್ಸೂರು ವಿವೇಕಾನಂದ ಪ್ರಾಥಮಿಕ ಶಾಲೆ 14ಸೀಟು, ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆ ಬೊಳ್ಳಾಜೆ 1 ಸೀಟು, ಶ್ರೀ ಶಾರದಾ ಪ್ರಾಥಮಿಕ ಶಾಲೆ ಗೂನಡ್ಕ ಇಲ್ಲಿ 2 ಸೀಟುಗಳು ಹೀಗೆ 5 ಅನುದಾನಿತ ಶಾಲೆಗಳಲ್ಲಿ 26 ಸೀಟುಗಳು ಆರ್.ಟಿ.ಇ. ಯೋಜನೆಯಲ್ಲಿ ಸುಳ್ಯ ತಾಲೂಕಿಗೆ ಈ ಬಾರಿ ಲಭ್ಯವಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.