Breaking News

ಸುಳ್ಯ ಎನ್ನೆಂಸಿಯಲ್ಲಿ ಉಚಿತ ಕ್ರೀಡಾ ಶಿಬಿರ: ಆಯ್ಕೆಯಾದವರಿಗೆ ಉಚಿತ ಶಿಕ್ಷಣ

Advt_Headding_Middle
Advt_Headding_Middle

ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಇದರ ಆಶ್ರಯದಲ್ಲಿ ಸುಳ್ಯ ಎನ್ನೆಂಸಿಯಲ್ಲಿ ಇದರ ವತಿಯಿಂದ ಉಚಿತ ಕ್ರೀಡಾ ಬೇಸಿಗೆ ಶಿಬಿರ ಮತ್ತು ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವು ಸುಳ್ಯದ ಎನ್.ಎಮ್.ಸಿ. ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಎನ್ನೆಂಸಿ ಪ್ರಾಂಶುಪಾಲರಾದ ಡಾ.ಗಿರಿಧರ ಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಾ.20ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ವಿಷಯ ತಿಳಿಸಿದರು.
ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಹಾಗೂ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ ವಸತಿ, ಸೌಲಭ್ಯ ,ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ.
ಮಾ.28 ರಿಂದ ಮಾ.30ರವರೆಗೆ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಕ್ರೀಡಾಕೋಟದಡಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಎ.15ರಿಂದ 17ರ ತನಕ ಪಿಯು ಶಿಕ್ಷಣಕ್ಕೆ ಕ್ರೀಡಾ ಕೋಟದಡಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮಹಿಳಾ, ಪುರುಷ ಪ್ರತ್ಯೇಕ ವಿಭಾಗದಲ್ಲಿ ಕಬಡ್ಡಿ, ವಾಲಿಬಾಲ್, ಅಥ್ಲೆಟಿಕ್ಸ್, ವೈಟ್ ಲಿಫ್ಟಿಂಗ್, ಕೀಡಾಕೂಟ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎನ್.ಎಮ್.ಸಿ. ಪಿಯು ವಿಭಾಗ ಪ್ರಾಂಶುಪಾಲೆ ಮಮತಾ ಪುರುಷೋತ್ತಮ್, ಎನ್ನೆಂಸಿ ದೈಹಿಕ ಶಿಕ್ಷಣ ನಿರ್ದೇಶಕ ಸೀತಾರಾಮ ಎಂ.ಡಿ, ರಾಷ್ಟ್ರೀಯ ವೈಟ್ ಲಿಪ್ಟಿಂಗ್ ತರಬೇತುದಾರ ಎ.ರಮೇಶ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.