ಮೇಘಶಾಲಾ ಮತ್ತು ಲೆನೋವಾ ವತಿಯಂದ ಸುಳ್ಯ ತಾಲೂಕಿನ 30 ಶಾಲೆಗಳಿಗೆ ಟ್ಯಾಬ್ ವಿತರಣೆ

Advt_Headding_Middle
Advt_Headding_Middle

ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಇಲ್ಲಿ ಮಾ.8ರಂದು ಸುಳ್ಯ ತಾಲೂಕಿನ 30 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಲೆನೋವಾ ಮತ್ತು ಮೇಘಶಾಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ತಲಾ 12800 ಮೌಲ್ಯದ ಟ್ಯಾಬ್ ವಿತರಿಸಲಾಯಿತು. ಟ್ಯಾಬ್‌ನ್ನು ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ ಇವರು ವಿತರಿಸಿದರು. ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯ ತಂತ್ರಾಂಶವನ್ನು ಮೇಘಶಾಲಾ ಹೊಂದಿದ್ದು ಶಾಲೆಗಳ ಎಲ್ಲಾ ಪಾಠಗಳನ್ನು ಪೂರಕ ಚಟುವಟಿಕೆಗಳು, ವಿಡಿಯೋ, ಸ್ಲೈಡ್ ಬಳಸಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಇವುಗಳನ್ನು ಶಾಲೆಗಳಲ್ಲಿ ಬಳಸಲು ಅನುಕೂಲವಾಗುವಂತೆ ಲೆನೋವಾ ಇಂಡಿಯಾ ಸಂಸ್ಥೆಯು ಉಚಿತ ಟ್ಯಾಬ್‌ನ್ನು ವಿತರಿಸಿದ್ದು ಗ್ರಾಮೀಣ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೊಸ ಮುನ್ನುಡಿ ಬರೆದಂತಾಗಿದೆ. ಈ ಸಂದರ್ಭದಲ್ಲಿ ಮೇಘಶಾಲಾ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ತಾಲೂಕಿನ ೩೦ ಶಾಲೆಗಳ ಶಿಕ್ಷಕರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.