ಶ್ರದ್ಧೆಯ ಆರಾಧನೆಗೆ ದೇವರ ಅನುಗ್ರಹ- ಪೂರ್ಣ ಆತ್ಮರಾಮ

Advt_Headding_Middle
Advt_Headding_Middle

ತನ್ನೊಳಗಿನ ಅಹಂ ಬಿಟ್ಟು ವಿನೀತ ಭಾವದಿಂದ ದೈವ ದೇವರನ್ನು ಆರಾಧಿಸಿದರೆ ಅನುಗ್ರಹ ಖಂಡಿತ ಎಂದು ಉಪನ್ಯಾಸ ಕ ಪೂರ್ಣ ಆತ್ಮರಾಮ ಹೇಳಿದರು. ಅವರು ಮಾ.19 ರಂದು ದುಗಲಡ್ಕ ದ ಶ್ರೀ ದುಗ್ಗಲಾಯ ದೈವಸ್ದಾನದಲ್ಲಿ ನಡೆದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಅಂಗವಾಗಿ ನಡೆದ
ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.


ಸಭೆಯ ಅಧ್ಯಕ್ಷತೆಯನ್ನು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು ವಹಿಸಿದ್ದರು. ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ಗೌರವಾಧ್ಯಕ್ಷ ಸುಂದರ ರಾವ್, ನಾಗನಕಟ್ಟೆ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಗುಳಿಗನಕಟ್ಟೆ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ರೈ,ಯುವ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹನುಮಗಿರಿ ಮೇಳದ ಹಾಸ್ಯ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸೀತಾರಾಮ ಕುಮಾರ್ ಕಟೀಲ್ ರವರನ್ನು ಸನ್ಮಾನಿಸಲಾಯಿತು. ದೈವಸ್ಥಾನದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ ಮೂವರನ್ನು ಗೌರವಿಸಲಾಯಿತು.
ಕಾರ್ಯ ಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಯತೀಶ್ ರೈ ಸ್ವಾಗತಿಸಿದರು, ಶ್ರೀಮತಿ ಶೈಲಜ ಧಾರ್ಮಿಕ ಉಪನ್ಯಾಸಕರನ್ನು ಪರಿಚಯಿಸಿದರು, ಗಿರೀಶ್ ಕುಂಟಿನಿ ವಂದಿಸಿ, ಕಾರ್ಯ ಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.