ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಸಹಕಾರ ಭಾರತಿ ಅಭ್ಯರ್ಥಿ ಸೋಲು

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕತ್ವಕ್ಕೆ ನಡೆದ ಚುನಾವಣೆಯಲ್ಲಿ ಸುಳ್ಯ ತಾಲೂಕಿನಿಂದ ಸಹಕಾರ ಅಭ್ಯರ್ಥಿ ಪರವಾಗಿ ಸ್ಪರ್ಧಿಸಿದ ವೆಂಕಟ್ ದಂಬೆಕೋಡಿಯವರ ಸೋಲು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ.


ಸುಳ್ಯ ತಾಲೂಕಿನ 23 ಸಹಕಾರ ಸಂಘಗಳಲ್ಲಿ ಬಿಜೆಪಿ ಬೆಂಬಲಿತ 17 ಮತದಾರ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 6 ಮಂದಿ ಮತದಾರ ಪ್ರತಿನಿಧಿಗಳು ಇದ್ದರು. ಆದ್ದರಿಂದ ಸಹಕಾರ ಭಾರತಿಯ ವೆಂಕಟ್ ದಂಬೆಕೋಡಿ ಗೆಲುವು ನಿಶ್ಚಿತವಾಗಿತ್ತು. ಆದರೆ ಎಂ.ಎನ್.ರಾಜೇಂದ್ರಕುಮಾರ್‌ರವರ ಕಾರ್ಯತಂತ್ರದ ಎದುರು ಸಹಕಾರ ಭಾರತಿಯ ಸ್ಪರ್ಧೆ ನಿರರ್ಥಕಗೊಂಡು ಬಿಜೆಪಿಯ 7 ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ದೊರೆಯಿತು.

ಕಾಂಗ್ರೆಸ್ ಬೆಂಬಲಿತ ಕೆ.ಎಸ್.ದೇವರಾಜ್ ವಿಜಯಿಯಾದರು.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದು, ಅಡ್ಡ ಮತದಾನ ಮಾಡಿದ ಪ್ರತಿನಿಧಿಗಳ ವಿರುದ್ಧ ಕಟು ಶಬ್ಧಗಳಲ್ಲಿ ಟೀಕೆ ಹಾಗೂ ಆರೋಪಗಳು ವ್ಯಕ್ತವಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.