ಕನಕಮಜಲು : ವಿಶ್ವಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle

ಕನಕನಮಜಲು ಸ್ವರ್ಣ ಮಹಿಳಾಮಂಡಲ ಇದರ ಆಶ್ರಯದಲ್ಲಿ ವಿಶ್ವಮಹಿಳಾ ದಿನಾಚರಣೆಯ ಪ್ರಯುಕ್ತ ಮಾ. ೧೭ರಂದು ವಿಶೇಷ ಸನ್ಮಾನ ಕಾಯ೯ಕ್ರಮವು ಪ್ರಾ. ಕೃ.ಪ. ಸಂ. ದ ಸಭಾಭವನ ಕನಕಸೌದದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಮಹಿಳಾ ಒಕ್ಕೂಟಗಳ ಅಧ್ಯಕ್ಷರಾದ ಶ್ರೀಮತಿ ಇಂದಿರಾ ರಾಜಶೇಖರ್ ಇವರು ನೆರವೇರಿಸಿದರು. ಸಭಾದ್ಯಕ್ಷತೆಯನ್ನು ಶ್ರೀಮತಿ ಕೃತಿಕಾ ಗುರುಪ್ರಸಾದ್ ಇವರು ವಹಿಸಿದ್ದರು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮಮತಾ ಬಿ. ಎಸ್, ಹಾಗೂ ಮುಖ್ಯ ಅಥಿತಿಗಳಾಗಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾಯ೯ಕ್ರಮದಲ್ಲಿ ಈ ಹಿಂದೆ ಸ್ವರ್ಣ ಮಹಿಳಾಮಂಡಲದ ಸವ೯ತೋಮುಖ ಏಳಿಗೆಗಾಗಿ ಶ್ರಮಿಸಿದ ೧೫ ಮಂದಿ ಪೂವಾ೯ಧ್ಯಕ್ಷರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೂ ಪ್ರತಿಭಾನ್ವಿತ ವಿದ್ಯಾಥಿ೯ಗಳಾದ ಕು. ಪ್ರಜ್ಞಾ , ಕು. ಮನಿಷಾ ಕುತ್ಯಾಲ ಇವರನ್ನು ಸನ್ಮಾನಿಸಲಾಯಿತು. ಹಾಗೂ ಕನಕಮಜಲಿನ ಮಹಿಳಾ ಅಂಚೆ ವಿತರಕರಾದ ಶ್ರೀಮತಿ ಸುಶೀಲಾ ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಪ್ರೇಮಾ ಅಡ್ಕಾರ್ ವಂದನಾಪ೯ಣೆ ಮಾಡಿದರು. ಶ್ರೀಮತಿ ರೇವತಿ ಪಲ್ಲತಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.