ಕೊಡಿಯಾಲದಲ್ಲಿ ಮನರಂಜಿಸಿದ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ – ಸನ್ಮಾನ

Advt_Headding_Middle
Advt_Headding_Middle

ಪುರುಷರ ವಿಭಾಗದಲ್ಲಿ ಪ್ರಥಮ ಭಕ್ತಾಂಜನೇಯ ಬಿ.ಸಿ.ರೋಡ್- ಮಹಿಳೆಯರ ವಿಭಾಗದಲ್ಲಿ ಪ್ರಥಮ ಪರಿವಾರ ಪಂಜ

ಕೊಡಿಯಾಲ ಗ್ರಾಮದ ಶಿವಶಕ್ತಿ ಕೊಡಿಯಾಲ ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಲ್ ಗ್ರಿಪ್ ಮಾದರಿಯ ಪುರಿಷರ ಮತ್ತು ಮಹಿಳಾ ವಿಭಾಗದ ಲೆವೆಲ್ ಮಾದರಿಯ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟವು ಮಾ.23  ರಂದು ಕೊಡಿಯಾಲ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯಿತು.

ಪುರುಷರ ವಿಭಾಗದ ಫುಲ್ ಗ್ರಿಪ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು ೨೬ ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನವನ್ನು ಭಕ್ತಾಂಜನೇಯ ಬಿ.ಸಿ.ರೋಡ್ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ವಿಷ್ಣು ಬಳಗ ಅಡ್ಕ,ತೃತೀಯ ಬಹುಮಾನವನ್ನು ಅನುಗ್ರಹ ಚೇಲೂರು, ನಾಲ್ಕನೆ ಬಹುಮಾನವನ್ನು ಶ್ರೀ ಗಣೇಶ್ ಬೆಳ್ತಂಗಡಿ,ಐದನೇ ಬಹುಮಾನವನ್ನು ಕಾಡಬೆಟ್ಟು ಫ್ರೆಂಡ್ಸ್, ಆರನೇ ಬಹುಮಾನವನ್ನು ಕುಂಜರ್ಪ ಉಜಿರೆ, ಏಳನೇ ಬಹುಮಾನವನ್ನು ನಂದಿ ಫ್ರೆಂಡ್ಸ್ ಬೆದ್ರಾಳ,ಎಂಟನೇ ಬಹುಮಾನವನ್ನು ಸಾಯಿ ಫ್ರೆಂಡ್ಸ್ ಬಂದಾರು ಪಡೆದುಕೊಂಡಿತು.

ಮಹಿಳಾ ವಿಭಾಗದಲ್ಲಿ ೫ ತಂಡಗಳು ಭಾಗವಹಿಸಿದ್ದು ಪರಿವಾರ ಪಂಜ ಪ್ರಥಮ ಬಹುಮಾನವನ್ನು,ಸುಬ್ರಹ್ಮಣ್ಯೇಶ್ವರ ಕೊಡಿಯಾಲ ದ್ವಿತೀಯ ಬಹುಮಾನವನ್ನು ಮತ್ತು ತೃತೀಯ ಬಹುಮಾನವನ್ನು ಫ್ರೆಂಡ್ಸ್ ಐವರ್ನಾಡು ಪಡೆದುಕೊಂಡಿತು.
ಪಂದ್ಯಾಟದ ನಿರ್ಣಾಯಕರಾಗಿ ಮನೋಹರ ಪುತ್ತೂರು ಮತ್ತು ಸುದಾಕರ ರೈ ಸಹಕರಿಸಿದ್ದರು. ನಿರೂಪಕರಾಗಿ ವಿಖ್ಯಾತ್ ಸುಳ್ಯ ಮತ್ತು ವಸಂತ ಪೂಜಾರಿ ಮಾಲಾರ್ ಪುತ್ತೂರು ಇವರು ಸಹಕರಿಸಿದ್ದರು.

ಉದ್ಘಾಟನೆ : ಕಾರ್ಯಕ್ರಮವನ್ನು ಬೆಳ್ಳಾರೆಯ ಉದ್ಯಮಿ ಜೇಸಿಐ ಪೂರ್ವಾಧ್ಯಕ್ಷ ಮಿಥುನ್ ಶೆಣೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಇಂಟಕ್ ಕೋಶಾಧಿಕಾರಿ ಸುನಿಲ್ ರೈ ಪೆರುವಾಜೆ ವಹಿಸಿ ಮಾತನಾಡಿ ಯುವಕರು ಉತ್ತಮವಾಗಿ ಪಂದ್ಯಾಟಗಳನ್ನು ಸಂಘಟಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿಯೂ ಯುವ ಜನತೆ ಅಪಾರವಾದ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಲ್ಪಣೆಯ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಸಾಯಿಪ್ರಸಾದ್ ರೈ ಕೆಡೆಂಜಿಮೊಗ್ರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಿಯಾಲ ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಪಿ.ಎಸ್. ಕಲ್ಲಗದ್ದೆ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಅಧ್ಯಕ್ಷ ದಿವಾಕರ ಪೈ ಬಾಚೋಡಿ,ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕಲ್ಪಡ, ಪಿ.ಡಬ್ಲ್ಯೂ ಡಿ.ಗುತ್ತಿಗೆದಾರರಾದ ಕರುಣಾಕರ ರೈ ಮರಿಕೇಯಿ,ಶಿವಶಕ್ತಿ ಕೊಡಿಯಾಲ ಅಧ್ಯಕ್ಷ ಅಜೇಯ್ ಜೆ.ಎಸ್.ಸಾರಕರೆ ಉಪಸ್ಥಿತರಿದ್ದು ಮಾತನಾಡಿದರು.

ವಿಖ್ಯಾತ್ ಸುಳ್ಯ ಸ್ವಾಗತಿಸಿ, ಹರೀಶ್ ಕಾರ್ಯಕ್ರಮ ನಿರೂಪಿಸಿ,ವಿಖ್ಯಾತ್ ಸುಳ್ಯ ವಂದಿಸಿದರು.
ಸನ್ಮಾನ : ಕನ್ನಡ ಚಿತ್ರರಂಗದ ಕಿರುತೆರೆ ನಟಿ ಕು.ಭವ್ಯಶ್ರೀ ಪೂಜಾರಿ ಕೊಡಿಯಾಲ ಇವರನ್ನು ಸನ್ಮಾನಿಸಲಾಯಿತು.
ಪ್ರಗತಿಪರ ಕೃಷಿಕರಾದ ಶ್ರೀಮತಿ ರಮಾ ಪಿ.ರೈ ಪೋನಡ್ಕ ಇವರು ಭವ್ಯ ಶ್ರೀಯವರಿಗೆ ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಮೋಹನ್ ಸಾರಕರೆ,ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ,ಮಾಜಿ ಸೈನಿಕರಾದ ರವೀಂದ್ರ ರಾಮಕುಮೇರಿ,ಬೆಳ್ಳಾರೆ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ಜಯಂತ ಸಾರಕರೆ,
ಶಿವಶಕ್ತಿ ಕೊಡಿಯಾಲ ಅಧ್ಯಕ್ಷ ಅಜೇಯ್ ಜೆ.ಎಸ್.ಸಾರಕರೆ,ಪ್ರಧಾನ ಕಾರ್ಯದರ್ಶಿ ನಿತೀಶ್ ರೈ ಕುಂಟುಪುಣಿಗುತ್ತು,ಉಪಾಧ್ಯಕ್ಷ ಜಗದೀಶ ಆಚಾರ್ಯ, ಖಜಾಂಜಿ ಯತೀಶ್ ಕುರಿಯಾಜೆ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ : ಪಂದ್ಯಾಟದ ಮೊದಲು ಪ್ರಮೋದ್ ಬೆಳ್ಳಾರೆ ಸಾರಥ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಡ್ಯಾನ್ಸ್ ಧಮಾಕ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.