HomePage_Banner
HomePage_Banner
Breaking News

ಸಾವಯವ ಗೊಬ್ಬರ ಮಾರಾಟದಲ್ಲಿ ಯಶಸ್ಸು ಕಂಡ ಸುಳ್ಯದ ಸಮೃದ್ಧಿ ಆರ್ಗಾನಿಕ್ಸ್

ಸಾವಯವ ಗೊಬ್ಬರ ಮಾರಾಟದಲ್ಲಿ ಯಶಸ್ಸು ಕಂಡ ಸುಳ್ಯದ  ಸಮೃದ್ಧಿ ಆರ್ಗಾನಿಕ್ಸ್

ಹಸಿರು ಕ್ರಾಂತಿಯ ನಂತರ ರೈತರು ಅತೀ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡ ಪರಿಣಾಮ ಉತ್ಪಾದನೆ ಇಳಿಮುಖವಾಯಿತು. ಹಸಿರೆಲೆ ಗೊಬ್ಬರ ಹಾಗೂ ಹಟ್ಟಿ ಗೊಬ್ಬರದ ಅಭಾವ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಮತ್ತು ರಾಸಾಯನಿಕ ಗೊಬ್ಬರಗಳ ದುಷ್ಪರಿಣಾಮಗಳಿಂದ ಚೇತರಿಸಿಕೊಂಡು ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ರಬ್ಬರ್, ಕಾಫಿ, ಕೊಕ್ಕೋ, ಬಾಳೆ ಇತ್ಯಾದಿ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಅನಿವಾರ್ಯವಾಯಿತು. 

ಈ ನಿಟ್ಟಿನಲ್ಲಿ ಅನೇಕ ಸಾವಯವ ಗೊಬ್ಬರಗಳು, ಗೊಬ್ಬರ ಮಳಿಗೆಗಳು ಮಾರುಕಟ್ಟೆಯಲ್ಲಿವೆ. ಸುಳ್ಯ ದಲ್ಲಿ ರುವ ಸಮೃದ್ಧಿ ಆರ್ಗಾನಿಕ್ಸ್ ಕೂಡಾ ಈ ಉದ್ಯಮದಲ್ಲಿ ಯಶಸ್ಸು ಕಂಡಿದೆ.
ಉದ್ಯಮಿ ಸದಾಶಿವ ಕುಕ್ಕು ಡೇಲು ಇವರ ಮಾಲಕತ್ವದ ಸಮೃದ್ಧಿ ಆರ್ಗಾನಿಕ್ಸ್ ರೈತರ ಕೃಷಿ ಬದುಕಿಗೆ ಆಶಾದಾಯಕವಾಗಿ ಪರಿಣಮಿಸಿದೆ.
ಸದಾಶಿವ ಕುಕ್ಕುಡೇಲುರವರು ಪೇರಾಲಿನ ದಿ. ಮೋನಪ್ಪ ಗೌಡರ ಪುತ್ರ. ಪದವಿ ಶಿಕ್ಷಣದ ಬಳಿಕ ಒಂದು ವರ್ಷ ಪತ್ರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅವರು ೧೯೯೮ರಿಂದ ೨೦೦೪ರವರೆಗೆ ಅಡ್ಯನಡ್ಕದ ವಾರಣಾಸಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದರು.
ಆ ಬಳಿಕ ಸುಳ್ಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ನಿರ್ಧಾರಕ್ಕೆ ಬಂದು ಸಾವಯವ ಗೊಬ್ಬರಗಳ ಮಾರಾಟ ಮಳಿಗೆ ಆರಂಭಿಸಿದರು. ಅದಿಂದು ಸಮೃದ್ಧಿ ಆರ್ಗಾನಿಕ್ಸ್ ಹೆಸರಿನಲ್ಲಿ ವಿಸ್ತಾರಗೊಂಡು ಬೆಳೆಯುತ್ತಿದೆ.
ಇಲ್ಲಿ ಹರಳಿಂಡಿ, ಬೇವಿನ ಹಿಂಡಿ, ಆಡು ಗೊಬ್ಬರ, ಕೋಳಿಗೊಬ್ಬರ ಹಾಗೂ ವಿವಿಧ ಕಂಪೆನಿಗಳ ಸಾವಯವ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸಮೃದ್ಧಿ ಎಂಬ ಸಾವಯವ ಗೊಬ್ಬರವನ್ನೂ ತಯಾರಿಸುತ್ತಿದ್ದಾರೆ. ಮುಖ್ಯ ಪೋಷಕಾಂಶಗಳದ ಸಾರಜನಕ, ರಂಜಕ, ಪೊಟ್ಯಾಶ್ ಹಾಗೂ ಸೂಕ್ಷ್ಮ ಪೋಷಕಾಂಶಗಳು ಸೂಕ್ತ ಪ್ರಮಾಣ ದಲ್ಲಿ ಇದರಲ್ಲಿದೆ. ಬೇವಿನ ಹಿಂಡಿ, ಹರಳು ಹಿಂಡಿ, ಮೀನಿನ ಹುಡಿ, ಸಕ್ಕರೆ ತ್ಯಾಜ್ಯ, ಎಲುಬಿನ ಹುಡಿ, ಕೋಳಿಗೊಬ್ಬರ, ಲಘು ಪೋಷಕಾಂಶ ಮುಖ್ಯವಾಗಿ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಮಿಶ್ರಣಗಳನ್ನು ಸೇರಿಸಿ ತಯಾರಿಸಲಾಗುವ ಗೊಬ್ಬರ ಎಲ್ಲಾ ಬೆಳೆಗಳಿಗೆ ಸೂಕ್ತವಾಗಿದೆ.
ಫೀಲ್ಡ್ ಕೆಲಸಗಾರರ ಮೂಲಕ ಇವುಗಳ ಮಾರ್ಕೆಟಿಂಗ್ ನಡೆ ಯುತ್ತದೆ. ಒಮ್ಮೆ ಖರೀದಿಸಿದವರು ಪ್ರತಿವರ್ಷ ಇದನ್ನು ಪುನರಾ ವರ್ತನೆ ಮಾಡುತ್ತಾರೆ.
ಅಡಿಕೆ, ತೆಂಗು, ರಬ್ಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಬೆಳೆ ಮತ್ತು ಉಪಬೆಳೆಗಳಿಗೆ ಸಂಬಂಧಪಟ್ಟ ಗೊಬ್ಬರಗಳೂ ಇಲ್ಲಿದೆ. ಇದರ ಜೊತೆಗೆ ಜೈವಿಕ ಶಿಲೀಂಧ್ರನಾಶಕ, ಸಾವಯವ ವಸ್ತುಗಳ ಕಂಪೋಸ್ಟ್ ಮಿಶ್ರಣ, ತರಕಾರಿ ಬೀಜಗಳನ್ನು ಮಾರಾಟ ಮಾಡಲಾಗುತ್ತದೆ.
ಸದಾಶಿವ ಕುಕ್ಕುಡೇಲುರವರ ಪತ್ನಿ ಭವಾನಿ, ಪುತ್ರ ಅಂಕಿತ್. ಕೃಷಿ ಕುಟುಂಬದಿಂದ ಬಂದಿರುವ ಸದಾಶಿವರವರು ಸದಾ ಕೃಷಿ ವ್ಯವಸ್ಥೆಯ ಉತ್ತೇಜನಕ್ಕಾಗಿಯೇ ಶ್ರಮಿಸುತ್ತಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.