ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ: ಮಿತ್ತೂರು ನಾಯರ್ ದೈವಸ್ಥಾನದಲ್ಲಿ ಹರೀಶ್ ರೈ ಉಬರಡ್ಕ ಪ್ರಾರ್ಥನೆ

Advt_Headding_Middle
Advt_Headding_Middle

 

 


ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಯ 7 ಮಂದಿ ಅಡ್ಡ ಮತದಾನ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್‌ನ ಕೆ.ಎಸ್.ದೇವರಾಜ್
ವಿಜಯಿ
ಯಾಗಿದ್ದರು. ಅಡ್ಡ ಮತದಾನ ಮಾಡಿದ 7ಮಂದಿಯಲ್ಲಿ ಹರೀಶ್ ರೈ ಉಬರಡ್ಕ ಇದ್ದರೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ತಿಳಿದ ಹರೀಶ್ ರೈ ಉಬರಡ್ಕರವರು ಮಾ.26ರಂದು ಬೆಳಿಗ್ಗೆ ಉಬರಡ್ಕದ ಮಿತ್ತೂರು ನಾಯರ್ ದೈವಸ್ಥಾನಕ್ಕೆ ಹೋಗಿ ನಾನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾದ ವೆಂಕಟ್ರಮಣ ಗೌಡ ದಂಬೆಕೋಡಿಯವರಿಗೇ ಮತ ಹಾಕಿದ್ದೇನೆ. ಯಾವುದೇ ಆಮಿಷಗಳಿಗೆ ನಾನು ಬಲಿಯಾಗಿಲ್ಲ ಎಂದು ಪ್ರಾರ್ಥನೆ ಮಾಡಿದ್ದಾರೆ. ಈ ಕುರಿತು ಸುದ್ದಿ ಪ್ರತಿನಿಧಿ ಸಂಪರ್ಕಿಸಿದಾಗ ನಾನು ಸತ್ಯ ಪ್ರಮಾಣ ಮಾಡಿದ್ದೇನೆ ಪಕ್ಷದ ವತಿಯಿಂದ ಸೂಚಿಸಿದ ಅಭ್ಯರ್ಥಿಗೆ ನಾನು ಮತ ಹಾಕಿದ್ದೇನೆ. ಆದರಿಂದ ದೈವದ ಮುಂದೆಯೇ ಪಕ್ಷದ ಹಿರಿಯರ ಎದುರು ಕೂಡ ಇದನ್ನೇ ಹೇಳಿದ್ದೇನೆ ಎಂದು ಅವರು ಹೇಳಿದರು. ದೈವಸ್ಥಾನ ಮುಂದೆ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಪಾಣತ್ತಿಲ, ಉಬರಡ್ಕ ಸಹಕಾರಿ ಬ್ಯಾಂಕಿನ ಸದಸ್ಯರು, ಹಿರಿಯರಾದ ಜಗದೀಶ್ ಕಕ್ಕೆಬೆಟ್ಟು, ಚಂದ್ರಶೇಖರ್ ನಾಯರ್ ಚೆನ್ನಡ್ಕ, ಈಶ್ವರ್ ಕಲ್ಚರ್‌ರವರು ಇದ್ದರು ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.