ಆರ್.ಕೆ. ನಾಯರ್‌ರವರಿಗೆ ಗ್ಲೋರಿ ಆಫ್ ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ

Advt_Headding_Middle
Advt_Headding_Middle

ಎಕೊನೋಮಿಕ್ ಗ್ರೋತ್ ಸೊಸಾಟಿ ಆಫ್ ಇಂಡಿಯಾ ನೀಡುವ ಗ್ಲೋರಿ ಆಫ್ ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿಯು ಗುಜರಾತ್‌ನಲ್ಲಿ ಉದ್ಯಮಿಯಾಗಿರುವ ಸುಳ್ಯದ ಆರ್.ಕೆ. ನಾಯರ್‌ರವರಿಗೆ ಲಭಿಸಿದೆ.
ಪರಿಸರ ಕ್ಷೇತ್ರದಲ್ಲಿ ಆರ್.ಕೆ.ನಾಯರ್ ನೀಡಿದ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಎ.೨೬ರಂದು ನೇಪಾಳದ ಕಾಠ್ಮಂಡುವಿನಲ್ಲಿ ಎಕೊನೋಮಿಕ್ ಗ್ರೋತ್ ಸೊಸಾಟಿ ಆಫ್ ಇಂಡಿಯಾ ಸಂಘಟಿಸಲಿರುವ ಇಂಡೋ ನೇಪಾಳ್ ಪ್ರೆಂಡ್‌ಶಿಫ್ ಫಾರ್ ಎಕೊನೋಮಿಕ್ ಗ್ರೋತ್ ಆಂಡ್ ಸೋಷಿಯಲ್ ಡೆವಲೆಪ್‌ಮೆಂಟ್ ಸೆಮಿನರ್‌ನಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಗುಜರಾತ್‌ನಲ್ಲಿ ಆನೇಕ ವರ್ಷಗಳಿಂದ ಉದ್ಯಮಿಯಾಗಿರುವ ಆರ್.ಕೆ.ನಾಯರ್ ಕೆಲವು ವರ್ಷಗಳಿಂದ ಗಿಡ ನೆಡುವ ಮೂಲಕ ಪರಿಸರ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದು ಈ ವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ೮ ಲಕ್ಷಕ್ಕೂ ಆಧಿಕ ಗಿಡಗಳನ್ನು ನೆಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.