Breaking News

ಕಾರಣಿಕದ ವಿಷ್ಣುಮೂರ್ತಿ ದೈವಸ್ಥಾನ ಕಲ್ಲುಗುಂಡಿಯಲ್ಲಿ ಒತ್ತೆಕೋಲದ ಸಂಭ್ರಮ

Advt_Headding_Middle
Advt_Headding_Middle

ಮಾ.28,29,30ರಂದು ನಡೆಯುವ ಕಲ್ಲುಗುಂಡಿ ಒತ್ತೆಕೋಲ, ಪಂಜುರ್ಲಿ ಮತ್ತು ಕಲ್ಲುರ್ಟಿ, ಗುಳಿಗ ದೈವಗಳ ಸಮ್ಮಾನ ಕಾರ್ಯಕ್ರಮವು ನಡೆಯಲಿದ್ದು, ಮಾ.28ರಂದು ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಟು ರಾತ್ರಿ 9ಕ್ಕೆ ಮೇಲೇರಿಗೆ ಅಗ್ನಿ ಸ್ಮರ್ಶ ಮಾಡಿ , ರಾತ್ರಿ ಕುಲ್ಚಾಟ ಹೊರಡುವುದು. ಮಾ.29ರಂದು ಬೆಳಿಗ್ಗೆ 6ಕ್ಕೆ ಅಗ್ನಿ ಪ್ರವೇಶ ಮತ್ತು ಪ್ರಸಾದ ವಿತರಣೆ, 9ಕ್ಕೆ ಮಾರಿಕ್ಕಳ ಪ್ರವೇಶ, ಮಾ.30ರಂದು ಪಂಜುರ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿರುವುದು.
ಕಲ್ಲುಗುಂಡಿ ಮಾಹಾವಿಷ್ಣು ಮೂರ್ತಿ ದೈವಸ್ಥಾನದ ಬಾಗಿಲಿಗೆ ಕವಿತಾ ವೈನ್ಸ್‌ನ ಮಾಲಕ ಓ.ಎಮ್. ಸುರೇಂದ್ರರವರು , ರಕ್ತೇಶ್ವರೀ, ಚಾಮುಂಡೇಶ್ವರೀ, ವಿಷ್ಣುಮೂರ್ತಿ ದೈವದ ಮೆಟ್ಟಿಲಿಗೆ ಕೋಶಾಧಿಕಾರಿ ಕೆ.ವಿ.ಮಂಜುನಾಥರು, ರಕ್ತೇಶ್ವರೀ ದೈವಸ್ಥಾನದ ಬಾಗಿಲಿಗೆ ಹರಿಪ್ರಸಾದ್ ಸಂಪಾಜೆಯವರು ತಾಮ್ರದ ಹೊದಿಕೆಯನ್ನು ದಾನ ರೂಪದಲ್ಲಿ ನೀಡಿರುತ್ತಾರೆ. ಒತ್ತೆಕೋಲದ ಗದ್ದೆಯಲ್ಲಿ ಕಲ್ಲುಗುಂಡಿಯ ಯುವಕರ ತಂಡವು ಶ್ರಮದಾನದ ಮೂಲಕ ಕಾರ್ಯಪ್ರವೃತರಾಗಿರುತ್ತಾರೆ. ಇವರಿಗೆ ಮಾರ್ಗದರ್ಶಕರಾಗಿ ಒತ್ತೆಕೋಲ ಸಮಿತಿಯ ಪದಾಧಿಕಾರಿಗಳು ಸಲಹೆ ಸೂಚನೆಯನ್ನು ನೀಡುತ್ತಿದ್ದಾರೆ.

ಪೋಟೋ, ವಿಡಿಯೋ ಯೂಸಫ್ ಕಲ್ಲುಗುಂಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.