Breaking News

ಎಲಿಮಲೆ ಸ. ಪ್ರೌಢಶಾಲೆಯಲ್ಲಿ ಕಲರವ ಬೇಸಿಗೆ ಶಿಬಿರ

Advt_Headding_Middle
Advt_Headding_Middle

ಸರಕಾರಿ ಪ್ರೌಢಶಾಲೆ ಎಲಿಮಲೆ ಹಾಗು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಅಶ್ರಯದಲ್ಲಿ ಎಲಿಮಲೆ ಪ್ರೌಢಶಾಲೆಯಲ್ಲಿ ಎಪ್ರಿಲ್ ೪ ರಿಂದ ೬ರ ವರೆಗೆ ವಿಧ್ಯಾರ್ಥಿಗಳಿಗೆ ಕಲರವ ಬೇಸಿಗೆ ಶಿಬಿರ ನಡೆಯಲಿದೆ. ಶಿಬಿರದ ಉದ್ಘಾಟನೆಯನ್ನು  ಲೇಖಕ ಹಾಗು ಪತ್ರಕರ್ತ ದುರ್ಗಾಕುಮಾರ್ ನಾಯರಕೆರೆ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಲಾಭಿವ್ರದ್ದಿ ಸಮಿತಿ ಅಧ್ಯಕ್ಷ ಪುರುಷೊತ್ತಮ ಕಜೆ ಇವರು ವಹಿಸಲಿದ್ದಾರೆ. ಸಮಾರೊಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಇವರು ವಹಿಸಲಿದ್ದಾರೆ. ಸಮಾರೊಪ ಭಾಷಣವನ್ನು ಬಾಬು ಗೌಡ ಅಚ್ರಪ್ಪಾಡಿ ಇವರು ಮಾಡಲಿದ್ದಾರೆ. ಪ್ರಮಾಣ ಪತ್ರವನ್ನು ಲತಾಮಧುಸೂಧನ್ ಇವರು ವಿತರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪಿ ಎನ್ ಭಟ್, ಕ್ರಷ್ನಪ್ಪ ಬಂಬಿಲ ಗಿರಿಜ ಎಮ್ ವಿ ,ಚೂಡಾಮಣಿ ರಮ್ಯ ಬಾಬ್ಲಿಬೆಟ್ಟು ಹಾಗು ಶಶಿಧರ ಮಾವಿನಕಟ್ಟೆ ಭಾಗವಹಿಸಲಿದ್ದಾರೆ. ಶಿಬಿರ ಉಚಿತವಾಗಿದ್ದು ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದು ಮುಖ್ಯಗುರು ಚಂದ್ರಶೇಖರ್ ಪೇರಾಲ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.