ಮೈಲಿಗಲ್ಲು ಸ್ಥಾಪಿಸಿದ ರೆಪ್ಕೋ ಬ್ಯಾಂಕ್

Advt_Headding_Middle
Advt_Headding_Middle

ಸುಳ್ಯದಲ್ಲಿ ಶ್ರೀರಾಮಪೇಟೆಯಲ್ಲಿ ಶಾಖೆಯನ್ನು ಹೊಂದಿರುವ ಕೇಂದ್ರ ಸರ್ಕಾರ ಸ್ವಾಮ್ಯದ ರೆಪ್ಕೋ ಬ್ಯಾಂಕ್ ತನ್ನ ಸುವರ್ಣ ಮಹೋತ್ಸವ ವರ್ಷದಲ್ಲಿ 15 ಸಾವಿರ ಕೋಟಿ ರೂ ವಹಿವಾಟು ನಡೆಸುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ.


ರೆಪ್ಕೋ ಬ್ಯಾಂಕ್ ನಡೆಸಿದ ಬಹಿವಾಟಿನಲ್ಲಿ 8,669 ಕೋಟಿ ರೂ .ಒಟ್ಟು ಠೇವಣಿ ಹಾಗೂ 6,337 ಕೋಟಿ ರೂ ಮುಂಗಡ ಠೇವಣಿಯಾಗಿದೆ. ಸತತವಾಗಿ ಲಾಭದಲ್ಲಿರುವ ರೆಪ್ಕೋ ಬ್ಯಾಂಕ್ ಕಳೆದ 5 ವರ್ಷಗಳಿಂದ ತೆರಿಗೆ ಬಳಿಕ 1೦೦ ಕೋಟಿ ರೂ. ಲಾಭ ಗಳಿಸುತ್ತ ಬಂದಿದೆ. ೨೦೧೮-೧೯ ನೇ ಸಾಲಿನಲ್ಲಿ ೧೧೦ ಕೋಟಿ ರೂ.ಲಾಭ ಗಳಿಸುವ ನಿರೀಕ್ಷೆ ಹೊಂದಿದ್ದು ಇದರಲ್ಲಿ ಶೇ.೨೦ ಷೇರುದಾರರಿಗೆ ಡಿವಿಡೆಂಡ್ ನೀಡಲಾಗುತ್ತದೆ ಎಂದು ಬ್ಯಾಂಕಿನ ವಯವಸ್ಥಾಪಕ ನಿರ್ದೇಶಕಿ ಆರ್.ಎಸ್.ಇಸಬೆಲ್ಲಾ ತಿಳಿಸಿದ್ದಾರೆ.
ಬ್ಯಾಂಕ್ ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಲ್ಲಿಯೂ ಮುಂಚೂಣಿಯಲ್ಲಿದೆ.ರೆಪೇಟ್ರಿಯಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿದೆ. ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗೆ ಕೂಡ ನೆರವಾಗುತ್ತಿದೆ. ಅದೇ ರೀತಿ ವಿಮಾ ಸೌಲಭ್ಯವನ್ನು ಟ್ರಸ್ಟ್ ಮೂಲಕ ಒದಗಿಸಲಾಗುತ್ತದೆ.ಪ್ರಸಕ್ತ ವರ್ಷ ಇದಕ್ಕಾಗಿ ೭.೨೦ ಕೋಟಿ ರೂ ಖರ್ಚು ಮಾಡಿದ್ದು ೩೭,೫೦೦ ಮಂದಿ ಲಾಭ ಪಡೆದುಕೊಂಡಿದ್ದಾರೆ. ಈ ಮೂಲಕ ಬ್ಯಾಂಕ್ ಹೊಸ ಇತಿಹಾಸ ಬರೆದಿದೆ. ಶ್ರೀಲಂಕಾ,ಬರ್ಮಾ,ವಿಯೆಟ್ನಾಂ ಸೇರಿ ವಿವಿಧ ದೇಶದಿಂದ ವಾಪಾಸಾದವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ೧೯೬೯ ರಲ್ಲಿ ಆರಂಭವಾದ ರೆಪ್ಕೋ ಬ್ಯಾಂಕ್ ಇದೀಗ ಹೆಮ್ಮರವಾಗಿ ಬೆಳೆದಿದೆ ಎಂದು ಆರ್.ಎಸ್.ಇಸಬೆಲ್ಲಾ ತಿಳಿಸಿದ್ದಾರೆ.

೧೦೮ ಕಡೆ ರೆಪ್ಕೋ ಶಾಖೆ : ದೇಶದ ವಿವಿಧೆಡೆ ರೆಪ್ಕೋ ಬ್ಯಾಂಕಿನ ೧೦೮ ಶಾಖೆಗಳಿದ್ದು ೧೦ ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ. ಅದೇ ರೀತಿ ೧,೩೦೦ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಬ್ಯಾಂಕಿನ ಇನ್ನೊಂದು ಭಾಗವಾದ ರೆಪ್ಕೋ ಮೈಕ್ರೋ ಫೈನಾನ್ಸ್ ಲಿ. ಮಹಿಳಾ ಸ್ವಸಹಾಯ ಸಂಘಗಳಿಗೆ ಅಗತ್ಯ ನೆರವು ನೀಡುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಿಳಾ ಸ್ವ ಸಹಾಯ ಸಂಘ ಸಾವಿರ ಕೋಟಿ ರೂ ವಹಿವಾಟು ನಡೆಸಿದ್ದು ೫ ಲಕ್ಷ ಮಂದಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ರೆಪ್ಕೋ ಹೋಮ್ ಫೈನಾನ್ಸ್ ಲಿ,೧೦,೬೬೬ ಕೋಟಿ ರೂ.ವಹಿವಾಟು ನಡೆಸಿದ್ದು ೭೫,೫೦೦ ಗ್ರಾಹಕರನ್ನು ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.