Breaking News

ಏ.2-ಏ.3 : ಪಲ್ಲೋಡಿ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡಾವಳಿ-ನಾಗತಂಬಿಲ

Advt_Headding_Middle
Advt_Headding_Middle

ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ ಏ. 2 ರಿಂದ ಏ. 3 ರ ತನಕ ನಡೆಯಲಿದೆ.

ಏ.2 ರಂದು ಮುಂಜಾನೆ ಗಂಟೆ ೯ಕ್ಕೆ ನಾಗ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಕಲಶ ಶುದ್ಧಿ ಮತ್ತು ಸಾರ್ವಜನಿಕ ನಾಗತಂಬಿಲ ಸೇವೆ, ಗಂಟೆ 1೦ ರಿಂದ ಶ್ರೀ ಉಳ್ಳಾಕುಲು ಚಾಮುಂಡಿ ದೈವಸ್ಥಾನದಲ್ಲಿ ಕಲಶ ಶುದ್ಧಿ ಮತ್ತು ತಂಬಿಲ ಸೇವೆ , iಧ್ಯಾಹ್ನ ಅನ್ನ ಸಂತರ್ಪu, ರಾತ್ರಿ 8 ರಿಂದ ಅನ್ನ ಸಂತರ್ಪಣೆ, ರಾತ್ರಿ ಗಂಟೆ 1೦ ರಿಂದ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ, ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಶ್ರೀ ಪಾಷಾಣ ಮೂರ್ತಿ ದೈವಗಳ ಭಂಡಾರ ತರುವುದು. ಏ.೩. ರಂದು ಪ್ರಾತ:ಕಾಲ ೪ಕ್ಕೆ ಶ್ರೀ ಉಳ್ಳಾಕುಲು ನೇಮ, ಬೆಳಿಗ್ಗೆ ಗಂಟೆ 7 ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಪಾಷಾಣ ಮೂರ್ತಿ ದೈವದ ನೇಮ, ಬೆಳಿಗ್ಗೆ ಗಂಟೆ 9 ಕ್ಕೆ ಶ್ರೀ ರುದ್ರಚಾಮುಂಡಿ ದೈವದ ನೇಮ, ಬೆಳಿಗ್ಗೆ ಗಂಟೆ 1೦.3೦ ಕ್ಕೆ ಶ್ರೀ ಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ-ಸಭಾ ಕಾರ‍್ಯಕ್ರಮ : ಏ.2 ರಂದು ಸಂಜೆ ಗಂಟೆ 6.3೦ರಿಂದ ಪಲ್ಲೋಡಿ ಜ್ಞಾನ ಭಾರತಿ ಶಿಶು ಮಂದಿರದ ಪುಟಾಣಿಗಳಿಂದ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಸಂಭ್ರಮ.ರಾತ್ರಿ ೮.೩೦ರಿಂದ ಸಭಾ ಕಾರ‍್ಯಕ್ರಮದಲ್ಲಿ ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಸಂದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,ಗ್ರಾ.ಪಂ.ಸದಸ್ಯೆ ಹೇಮಲತಾ ಪಲ್ಲೋಡಿ ಪಾಲ್ಗೊಳ್ಳಲಿದ್ದಾರೆ.

ಯಕ್ಷಗಾನ ಭಾಗವತ ಪ್ರಶಾಂತ್ ರೈ ಮುಂಡಾಳಗುತ್ತು, ಶೈಕ್ಷಣಿಕಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕಾರ್ತಿಕೇಯ ಪಿ ಎನ್, ಪ್ರವೀಣ್ ಸಂಕಡ್ಕ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಸನ್ಮಾನಿಸಲಿದ್ದಾರೆ. ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಲಕ್ಷ್ಮೀಶ ಗಾಂಭೀರ ದೇವಸ್ಯ ತಳಮನೆ ಪಲ್ಲೋಡಿ, ದೈವಸ್ಥಾನದ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಉಪಸ್ಥಿತರಿರುವರು.ರಾತ್ರಿ ೧೦.೩೦.ರಿಂದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ತುಳು ಹಾಸ್ಯಮಯ ‘ಸಿರಿಕೃಷ್ಣ ಚಂದಪಾಲಿ’ ಮತ್ತು ಕನ್ನಡ ಪೌರಾಣಿಕ ‘ಶಿವ ಲೀಲಾಮೃತಾ’ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.