ಡಿ.ಸಿ.ಸಿ. ಬ್ಯಾಂಕ್ ಚುನಾವಣೆ-ಅಡ್ಡಮತದಾನ : ಮೂವರ ಪತ್ತೆ, ಬಿಜೆಪಿ ಮಂಡಲ ಸಮಿತಿ ಮಾಹಿತಿ

Advt_Headding_Middle
Advt_Headding_Middle

“ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 7 ಮಂದಿಯಲ್ಲಿ ಈಗಾಲೇ ಮೂರು ಮಂದಿಯನ್ನು ಪಕ್ಷ ಪತ್ತೆ ಮಾಡಿದೆ. ಉಳಿದವರಾರೆಂದು ವಾರದೊಳಗೆ ಪತ್ತೆ ಮಾಡಲಾಗುವುದು“ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಮಾ.3೦ರಂದು ಸುಳ್ಯದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆ ಅವರು ಉತ್ತರ ನೀಡಿದರು.

‘’ನಮ್ಮ ಪಕ್ಷದಿಂದ 17 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದರು. ಅವರಲ್ಲಿ 7 ಮಂದಿ ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರೆಂದು ಪತ್ತೆ ಕಾರ್ಯ ನಡೆದು, 3 ಈಗಾಗಲೇ ಯಾರೆಂದು ಗೊತ್ತಾಗಿದೆ. ಉಳಿದವರನ್ನು ಪತ್ತೆ ಮಾಡುತ್ತೇವೆ. ಎಲ್ಲರನ್ನು ರಾಜೀನಾಮೆ ಕೊಡಿಸುವುದರಿಂದ ನಿರಪರಾಧಿಗಳಿಗೆ ಅನ್ಯಾಯ ಆಗಬಾರದೆಂದು ಪತ್ತೆ ಕಾರ್ಯ ತಡವಾಗುತ್ತಿದೆ“ ಎಂದು ವೆಂಕಟ್ ಮಾಹಿತಿ ನೀಡಿದರು. ಪತ್ತೆಯಾದ ಮೂವರ ಹೆಸರು ಹೇಳುವಂತೆ ಪತ್ರಕರ್ತರು ಒತ್ತಾಯಿಸಿದಾಗ ‘’ಅದನ್ನು ಈಗ ಬಹಿರಂಗ ಪಡಿಸುವುದಿಲ್ಲ.  7 ಮಂದಿಯೂ ಯಾರೆಂದು ಗೊತ್ತಾದ ಮೇಲೆ ಜತೆಯಲ್ಲಿ ನಾವೇ ನಿಮ್ಮನ್ನು ಕರೆದು ತಿಳಿಸುತ್ತೇವೆ“ ಎಂದು ವೆಂಕಟ್ ಹೇಳಿದರು.
“ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯ ಅಡ್ಡ ಮತದಾನ ಲೋಕಸಭಾ ಚುನಾವಣೆಯ ಮೇಲೆ ಪಕ್ಷಕ್ಕೆ ಪರಿಣಾಮ ಬೀಳುವುದಿಲ್ಲ“ ಎಂದು ಶಾಸಕ ಅಂಗಾರರು ಹೇಳಿದರೆ, “ಅಡ್ಡಮತದಾನ ಮಾಡಿದವರು ಮತ್ತು ಅದಕ್ಕೆ ಸಹಕಾರ ನೀಡಿದವರು ಯಾರೆ ಇರಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಪಕ್ಷ ನಾಯಕರ ಪಕ್ಷ ಅಲ್ಲ. ಇದು ಕಾರ್ಯಕರ್ತರ ಪಕ್ಷ“ ಎಂದು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.