ಅಭಿವೃದ್ಧಿ ಮಾಡದ ಸಂಸದ ಕಟೀಲ್ ಮೋದಿಗಾಗಿ ನನಗೆ ಓಟು ಕೊಡಿ ಎಂದು ಕೇಳುವುದು ನಾಚಿಕೆಗೇಡು : ಕಾಂಗ್ರೆಸ್, ಜೆಡಿಎಸ್

Advt_Headding_Middle
Advt_Headding_Middle

“ಜಿಲ್ಲೆಯ ಸಂಸದರಾಗಿ ಅಭಿವೃದ್ಧಿ ಮಾಡಲಾಗದೇ, ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಸಂಸದ ನಳಿನ್ ಕುಮಾರ್ ಕಟೀಲ್‌ರವರು ತಮ್ಮ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗದೇ ಮೋದಿಗಾಗಿ ನನಗೆ ಮತ ನೀಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ. ಈ ರೀತಿ ಹೇಳಿದ ಮಾತ್ರಕ್ಕೆ ಮತ ನೀಡಲು ದ.ಕ. ಜಿಲ್ಲೆಯವರು ಮುರ್ಖರಲ್ಲ“ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರೆ, “ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿಸುವಲ್ಲಿ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ“ ಎಂದು ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದ್ದಾರೆ.


ಮಾ.೩೦ರಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲೀ ನಡೆಸಿದ ಜಂಟಿ ಪತ್ರಿಕಾಗೋಷ್ಠೀಯಲ್ಲಿ ಈ ಇಬ್ಬರು ನಾಯಕರು ಮಾತನಾಡಿದರು.
ಕಾಂಗ್ರೆಸ್‌ನ ಭರತ್ ಮುಂಡೋಡಿಯವರು ಮಾತನಾಡಿ, “ಕೋಮುವಾದಿ ಮತ್ತು ಪ್ರಜಾತಂತ್ರ ವಿರೋಧಿ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ಜಾತ್ಯಾತೀತತೆಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಒಟ್ಟಾಗಿದೆ. ಬಿಜೆಪಿಯವರು ಆಡಳಿತಕ್ಕೆ ಬಂದರೆ ದಲಿತರು, ಹಿಂದುಳಿದವರಿಗೆ ಅನ್ಯಾಯವಾಗುತ್ತದೆ. ಅವರು ಆರ್.ಎಸ್.ಎಸ್. ಅಜೇಂಡಾವನ್ನೇ ಈ ದೇಶದಲ್ಲಿ ಅನುಷ್ಠಾನ ಮಾಡುತ್ತಾರೆ.ಜನಪರ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ‘’ ಎಂದು ಹೇಳಿದರು.
ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಎಂಬಿ.ಸದಾಶಿವ ಮಾತನಾಡಿ, “ಕಾಲದ ಅವಶ್ಯಕತೆಗೆ ಸ್ಪಂದಿಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆಗೆ ಸಿದ್ಧಗೊಂಡಿದೆ. ಈ ಬಾರಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು ಯುವ ನಾಯಕ ಮಿಥುನ್ ರೈ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗುತ್ತಾರೆ. ಈ ನಿಟ್ಟಿನಲ್ಲಿ ಎ.೨ರಂದು ಬೆಳ್ಳಾರೆಯಲ್ಲಿ ಬೃಹತ್ ಸಭೆ ನಡೆಯಲಿದೆ. ಮುಂದಿನ ದಿನದಲ್ಲಿ ಚುನಾವಣಾ ಪ್ರಚಾರಕ್ಕೆಆಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಮಿಸಲಿದ್ದಾರೆ“ ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ, ಜೆ.ಡಿ.ಎಸ್ ಅಧ್ಯಕ್ಷ ದಯಾಕರ ಆಳ್ವ, ಪ್ರಮುಖರಾದ ಟಿ.ಎಂ.ಶಹೀದ್, ರಾಕೇಶ್ ಕುಂಟಿಕಾನ, ಶ್ರೀಹರಿ ಕುಕ್ಕುಡೇಲು, ಸತ್ಯಕುಮಾರ್ ಆಡಿಂಜ, ಎಸ್.ಸಂಶದುದೀನ್, ಜಿ.ಕೆ.ಹಮೀದ್, ದಾಮೋದರ ನಾರ್ಕೋಡು, ಇಕ್ಬಾಲ್ ಎಲಿಮಲೆ, ಸುಧೀರ್ ರೈ ಮೇನಾಲ, ಕೆ.ಎಂ.ಮುಸ್ತಫ, ಪ್ರಸಾದ್ ರೈ ಮೇನಾಲ, ಗೀತಾ ಕೋಲ್ಚಾರ್, ಜ್ಯೋತಿ ಪ್ರೇಮಾನಂದ, ಶಿವಕುಮಾರ್ ಕೌಡಿಚ್ಚಾರ್, ವಿಜೇಶ್ ಹಿರಿಯಡ್ಕ, ಮಿಥುನ್ ಕರ್ಲಪ್ಪಾಡಿ, ಅಶೋಕ್ ಚೂಂತಾರು, ಎಸ್.ಕೆ.ಹನೀಫ್, ರಹೀಮ್ ಫ್ಯಾನ್ಸಿ, ಮೋಹಿನಿ ಪೆಲ್ತಡ್ಕ, ಸುಜಯ ಕೃಷ್ಣ, ರಫಿಕ್ ಪಡು, ಬೀರಾ ಮೊಯಿದ್ದೀನ್ ಕನಕಮಜಲು, ಆರ್.ಕೆ.ಮಹಮ್ಮದ್, ಶಾಫಿ ಕುತ್ತಮೊಟ್ಟೆ, ಫವಾಜ್ ಕನಕಮಜಲು, ರೋಹನ್ ಪೀಟರ್, ನಂದರಾಜ್ ಸಂಕೇಶ, ಚೋಮ ಗಾಂಧಿನಗರ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಆನಂದ ಬೆಳ್ಳಾರೆ, ಅನಿಲ್ ರೈ ಬೆಳ್ಳಾರೆ, ಧರ್ಮಪಾಲ ಕೊಯಿಂಗಾಜೆ, ಲಕ್ಷ್ಮಣ ಶೆಣೈ, ಅಬ್ಬಾಸ್ ಹಾಜಿ ಕಟ್ಟೆಕಾರ್, ರಾಮಚಂದ್ರ ಬಳ್ಳಡ್ಕ, ಭವಾನಿಶಂಕರ ಕಲ್ಮಡ್ಕ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.