ಟಿ.ಎ.ಪಿ.ಸಿ.ಎಂ.ಎಸ್. ಆಡಳಿತ ಮಂಡಳಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನೂತನ ಆಡಳಿತ ಮಂಡಳಿ ಮತ್ತೆ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.


ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. 5 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು. ಬಿ ತರಗತಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್‌ನ ಗಂಗಾಧರ ಪಿ.ಎಸ್ 36 ಮತ ಗಳಿಸಿ ವಿಜಯಿಯಾದರು.

ಬಿಜೆಪಿಯ ಶೈಲೇಶ್ ಅಂಬೆಕಲ್ಲು 28 ಮತಗಳನ್ನು ಪಡೆದು ಪರಾಭವಗೊಂಡರು. ಬಿ ತರಗತಿ ಮಹಿಳಾ ಸ್ಥಾನದಲ್ಲಿ ಇಬ್ಬರು ಆಯ್ಕೆಗೊಳ್ಳಬೇಕಿದ್ದು, 40 ಮತ ಪಡೆದ ಅಶ್ವಿನಿ ಶೈಲೇಶ್ ಹಾಗೂ 31 ಮತ ಪಡೆದ ಅಮ್ಮಣ್ಣಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಚಂಚಲಾಕ್ಷಿ ಕೆ. ಹಾಗೂ ಸರೋಜಿನಿ ಎಂ.ಜಿ. ಮುಳುಗಾಡು ತಲಾ 29 ಮತ ಪಡೆದು ಪರಾಭವಗೊಂಡರು.
ಬಿ ತರಗತಿ ಹಿಂದುಳಿದ ವರ್ಗ ಪ್ರವರ್ಗ ’ಎ’ ವಿಭಾಗದಿಂದ ೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಬೀರಾಮೊಯಿದ್ದೀನ್ ೩೪ ಮತ ಪಡೆದು ವಿಜಯಿಯಾದರು. ಕಾಂಗ್ರೆಸ್‌ನ ಎ ರಾಧಾಕೃಷ್ಣ ಮತ್ತು ಬಿಜೆಪಿಯ ಹೇಮಲತಾ ಕುರುಂಜಿಗುಡ್ಡೆ ತಲಾ 32 ಮತಗಳನ್ನು ಪಡೆದಿದ್ದು, ಟಾಸ್ ಮೂಲಕ ಹೇಮಲತಾ ಆಯ್ಕೆಗೊಂಡರು. ದಿವಾಕರ ಪೈ 31 ಮತ ಪಡೆದರು.
ಬಿ. ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ಸಹಕರಿಸಿದರು.
ಆಡಳಿತ ಮಂಡಳಿಗೆ ಈ ಮೊದಲು ನಿತ್ಯಾನಂದ ಮುಂಡೋಡಿ, ಪಿ.ಸಿಜಯರಾಮ್, ವಿನೂಪ್ ಮಲ್ಲಾರ, ಸೋಮಶೇಖರ ಕೊಯಿಂಗಾಜೆ, ಉದಯಕುಮಾರ್ ಬೆಟ್ಟ, ಸತೀಶ್ ಕೂಜುಗೋಡು, ರಮೇಶ್ ಕೆ. ಹಾಗೂ ಚಂದ್ರಶೇಖರ ಕೆ. ಅವಿರೋಧವಾಗಿ ಆಯ್ಕೆಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.