ಅಗಲಿದ ಎನ್.ಎ.ಸುಂದರರವರಿಗೆ ಬಿ.ಜೆ.ಪಿ.ಕಛೇರಿಯಲ್ಲಿ ಶ್ರದ್ಧಾಂಜಲಿ ನುಡಿನಮನ

Advt_Headding_Middle

ಹಿರಿಯ ಸಹಕಾರಿ ಧುರೀಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ, ಬಿ.ಜೆ.ಪಿ ಮಾಜಿ ಮಂಡಲಾಧ್ಯಕ್ಷ ಎನ್.ಎ.ಸುಂದರರವರು ಎ.14ರಂದು ನಿಧನರಾಗಿದ್ದು ಅವರ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮವು ಪಕ್ಷದ ಕಛೇರಿಯಲ್ಲಿ ಎ.15ರಂದು ನಡೆಯಿತು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ, ಆರ್.ಎಸ್.ಎಸ್.ಕಾರ್ಯವಾಹ ನ.ಸೀತಾರಾಮ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ರವಿಚಂದ್ರ ಮಿಜಾರು, ತಳೂರು ಚಂದ್ರಶೇಖರ, ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಇರಿಸಲಾಗಿತ್ತು. ಪಕ್ಷದ ಎಲ್ಲಾ ಕಾರ್ಯಕರ್ತರು ತೆರಳಿ ಅಂತಿಮ ದರ್ಶನ ಪಡೆದರು.

ಓರ್ವ ಉತ್ತಮ ಸಂಘಟಕರಾಗಿ, ಪಕ್ಷವನ್ನು ಮುನ್ನಡೆಸಿ, ಗ್ರಾಮದ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿ ತಮ್ಮ ಜೀವನದಲ್ಲಿ ದೇಶ ಭಕ್ತ ವೀರ ಸಾವರ್ಕರ್‌ರವರಂತೆ ಕಂಡವರು. ಶರಣರು ಮರಣದ ನಂತರವು ಜೀವಂತವಾಗಿರುತ್ತಾರೆ. ಆ ಸಾಲಿಗೆ ಸೇರಿದ ವ್ಯಕ್ತಿಗಳಲ್ಲಿ ಎನ್.ಎ.ಸುಂದರರವರು ಒಬ್ಬರು: ಕಟೀಲ್

ಬಂಟ್ವಾಳದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎದೆಗುಂದದೆ ಪಕ್ಷದ ಒಳಿತಿಗಾಗಿ ಹಾಗೂ ಊರಿನ ಸಮಸ್ಯೆಗಳಿಗಾಗಿ ಹೋರಾಟದ ಹಾದಿಯಲ್ಲಿ ಬದುಕಿ, ಬಂಟ್ವಾಳದ ಹುಲಿ ಎಂದು ಖ್ಯಾತಿ ಪಡೆದಿದ್ದರು. ೩೦ ವರ್ಷದ ಒಡನಾಟದಲ್ಲಿ ಇಲ್ಲಿ ತನಕ ವೈಯುಕ್ತಿಕ ವಿಚಾರಕ್ಕಾಗಿ ಅಪೇಕ್ಷಿಸಿದವರಲ್ಲ. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಪರೋಪಕಾರಿಯಾದವರು. ಸಂಘಟನೆಗೆ ಮಹತ್ವ ನೀಡಿ ಬದುಕನ್ನು ಸವೆಸಿದವರು: ಎಸ್.ಅಂಗಾರ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಉಡುಪಿ ಜಿಲ್ಲೆಯಲ್ಲಿ ಹಾಗೂ ಬಂಟ್ವಾಳದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಪ್ರತಿ ಮನೆಗಳಲ್ಲಿ ಚಿರಪರಿಚಿತರಾದವರು. ಸಂಘವನ್ನು ಕಟ್ಟುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿರೋಧದ ನಡುವೆಯು ಹೋರಾಡಿ ಸವಲಾಗಿ ಸ್ವೀಕರಿಸಿ ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿ ವೀರ ಸಾವರ್ಕರ್‌ರಂತೆ ತೊಡಗಿಸಿಕೊಂಡು ಸಂಘಟಿಸಿದ್ದರು: ನ.ಸೀತಾರಾಮ
                                                                             …………….
ಹಿರಿಯ ಸಹಕಾರಿ ಧುರೀಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ, ಬಿ.ಜೆ.ಪಿ ಮಾಜಿ ಮಂಡಲಾಧ್ಯಕ್ಷ ಎನ್.ಎ.ಸುಂದರರವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಸುಳ್ಯದ ಯುವ ಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ಇರಿಸಲಾಗಿದ್ದು ಮೃತರ ಕುಟುಂಬಸ್ಥರು, ಬಂಧುಗಳು ಮತ್ತು ಗಣ್ಯರು, ಪಕ್ಷದ ನಾಯಕರು, ಸಹಕಾರಿ ಸಂಸ್ಥೆಯ ಅಧ್ಯಕ್ಷರುಗಳು, ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ, ಪ್ರಚಾರಕರು, ಅಭಿಮಾನಿಗಳು, ಹಿತೈಷಿಗಳು ಆಗಮಿಸಿ ಪಾರ್ಥಿವ ಶರೀರಕ್ಕೆ ಹಾರಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.