ಸುದ್ದಿ ಬಳಗ ಸುಳ್ಯ ಹೆಸರು ದುರುಪಯೋಗ : ಪೊಲೀಸರಿಗೆ ದೂರು ನೀಡಲು ನಿರ್ಧಾರ

ಸುದ್ದಿ ಬಳಗ ಸುಳ್ಯ ಎಂಬ ಹೆಸರನ್ನು ದುರುಪಯೋಗ ಪಡಿಸಿಕೊಂಡು ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡುತ್ತಿರುವ ಘಟನೆ ನಡೆದಿದೆ. ಸಚಿವರಿಬ್ಬರ ಬಗ್ಗೆ ಅವಹೇಳನಕಾರಿಯಾದ ಪ್ರಚಾರ ಸುದ್ದಿ ಬಳಗ ಸುಳ್ಯ ವಾಟ್ಸಾಪ್ ಗ್ರೂಪ್‌ನಲ್ಲಿ ಬಂದಿರುವುದಾಗಿ ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ತಿರುಚಿ ಪ್ರಚಾರ ನಡೆಸಲಾಗುತ್ತಿದ್ದು, ಇದನ್ನು ಪರಿಶೀಲಿಸಿದಾಗ ಈ ಅಪಪ್ರಚಾರದ ಸುದ್ದಿ, ಸುದ್ದಿಯ ಯಾವುದೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ಬಾರದೇ ಬೇರೆ ಯಾವುದೋ ವಾಟ್ಸಾಪ್ ಗ್ರೂಪ್‌ನಲ್ಲಿ ಬಂದ ಸುದ್ದಿಯನ್ನು ಸುದ್ದಿ ಬಳಗ ಸುಳ್ಯದ ಗ್ರೂಪ್‌ನಲ್ಲಿ ಬಂದಿದೆ ಎಂಬಂತೆ ಪುನರ್ ಸೃಷ್ಟಿಸಿ ಪ್ರಚಾರಪಡಿಸುತ್ತಿರುವುದಾಗಿ ತಿಳಿದು ಬಂದಿದೆ. ಇದರ ವಿರುದ್ಧ ಪೊಲೀಸರಿಗೆ ಮತ್ತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.