HomePage_Banner
HomePage_Banner
Breaking News

ಬೆಳ್ಳಾರೆಯ ತಡಗಜೆ ತರವಾಡಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ


ಬೆಳ್ಳಾರೆಯ ತಡಗಜೆ ತರವಾಡಿನಲ್ಲಿ ನೂತನವಾಗಿ ನಿರ್ಮಿಸಿದ ನಾಗನಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠೆ ಹಾಗೂ ಧರ್ಮದೈವ ಹೊಸಳಿಗಮ್ಮ ಮತ್ತು ವರ್ಣಾರ ಪಂಜುರ್ಲಿ ,ಜಾವತೆ,ಕುಪ್ಪೆ ಪಂಜುರ್ಲಿ ,ಕಲ್ಲುರ್ಟಿ,ಗುಳಿಗ ದೈವಗಳ ಪುನರ್ ಪ್ರತಿ಼ಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಎ.21 ಮತ್ತು ಎ.22 ರಂದು ವಿಜೃಂಭಣೆಯಿಂದ ನಡೆಯಲಿದೆ.

ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕ್ಷೇತ್ರ ಪಾಲಕಿಯಾಗಿ ನೆಲೆನಿಂತ ಶ್ರೀ ಹೊಸಳಿಗಮ್ಮ ತನ್ನ ಪರಿಚಾರಕರ ಕುಟುಂಬದ ಕಾರಣಿಕದ ಧರ್ಮದೈವವಾಗಿ ನೆಲೆನಿಂತ ಅಪರೂಪದ ಮತ್ತೊಂದು ಏಕೈಕ ಸ್ಥಳ ಬೆಳ್ಳಾರೆ ಸಮೀಪದ ತಡಗಜೆಯ ಮಡಿವಾಳ ಮನೆತನ. ದ.ಕ. ಜಿಲ್ಲೆಯಲ್ಲಿಯೇ ಕಾಣಬರುವುದು ಇವೆರಡೇ ಕಡೆ. ದೈವ ದೇವರುಗಳ ದಾರ್ಮಿಕ ಕಾರ್ಯಕ್ರಮಗಳ ಚಾಕರಿಗೆ ಅತೀ ಮುಖ್ಯವಾಗಿದ್ದ ಮಡಿವಾಳ ಸಮುದಾಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕ್ಷೇತ್ರಪಾಲಕಿಯಾಗಿದ್ದ ಹೊಸಳಿಗಮ್ಮನ ಚಾಕರಿಯಲ್ಲಿ ತೊಡಗಿಕೊಂಡಿತ್ತು.ಮುಂದೆ ಸಮುದಾಯದ ಹಿರಿಯರು ಬೆಳ್ಳಾರೆ ಗ್ರಾಮಕ್ಕೆ ಆರಸಿ ನೆಲೆನಿಲ್ಲತೊಡಗಿದಾಗ ಅವರೊಂದಿಗೆ ಶ್ರೀ ಹೊಸಳಿಗಮ್ಮವೂ ಆಗಮಿಸಿ ಕುಟುಂಭದ ಧರ್ಮದೈವವಾಗಿ ನೆಲೆನಿಂತು ಆರಾಧನೆಗಳು ನಡೆಯುತ್ತಿದ್ದವು.ಕಾಲಾನಂತರ ಕುಟುಂಭದ ಜಾಗ ಅತಿಕ್ರಮಣವೋ! ಕಾಲನ ಹೊಡೆತಕ್ಕೆ ಸಿಲುಕಿಯೋ ದೈವಸ್ಥಾನ ಪಾಳು ಬಿದ್ದಿದ್ದು, ಭೂಮಿಯನ್ನು ತನ್ನ ವಶದಲ್ಲಿಟ್ಟುಕೊಂಡ ಕುಟುಂಬವೊಂದು ದೈವದ ಸೊತ್ತುಗಳನ್ನು ನದಿಯಲ್ಲಿ ವಿಸರ್ಜನೆಗೊಳಿಸಿತ್ತು. ಅದೃಷ್ಟಾವಶಾತ್ ಮುಂದೆ ಇವು ೩ನೇ ತಲೆಮಾರಿನ ಹಿರಿಯರಾದ ಕೊರಗ ಮಡಿವಾಳರಿಗೆ ಬೆಳ್ಳಾರೆ ಸಮೀಪದ ನದಿ ದಂಡೆಯಲ್ಲಿ ದೊರೆತು ಅದನ್ನು ತಂದು ತಡಗಜೆಯ ಮನೆಯ ಹಲಸಿನ ಮರದಲ್ಲಿಟ್ಟು ಆರಾಧಿಸಿಕೊಂಡು ಬರುವ ಮೂಲಕ ಕ್ರಮೇಣ ಪುನರಪಿ ನಡಾವಳಿ ಸಹಿತ ಪರ್ವಾದಿಗಳು ಆರಂಭಗೊಂಡವು. ಕೊರಗ ಮಡಿವಾಳರ ಸಮಯದಲ್ಲಿ ನೇಮೊತ್ಸವ ಜರಗಿ ಬಳಿಕ ತಂಬಿಲಾದಿ ಸೇವೆಗಳು ಮುಂದುವರಿಯುತ್ತಿತ್ತು.ಕ್ರಮೇಣ ಮುಂದೆ ಜೀರ್ಣಾವಸ್ಥೆಗೆ ತಲುಪಿತ್ತು. ನಂತರ ೨೦೦೪ ಮೇ ೧೭ರಂದು ಬ್ರ|ವೇ|ಮೂ|ಶ್ರೀ ಕುಂಟಾರು ಸುಬ್ರಾಯ ತಂತ್ರಿ ಹಾಗೂ ಬ್ರ|ವೇ|ಮೂ| ರವೀಶ್ ತಂತ್ರಿಯವರ ನೇತ್ರತ್ವದಲ್ಲಿ ಪ್ರತಿಷ್ಠಾಧಿ ಕಾರ್ಯವು ನಡೆದಿದ್ದು ೧೨ವರ್ಷಗಳ ಬಳಿಕ ಅಷ್ಟಮಂಗಲ ಚಿಂತನೆ ನಡೆಸಿದಂತೆ ಈಗ ನೂತನ ನಾಗನ ಕಟ್ಟೆ, ಗುಳಿಗನ ಕಟ್ಟೆಯ ಪ್ರತಿಷ್ಠೆ, ಶ್ರೀ ಧರ್ಮದೈವ ಹೊಸಳಿಗಮ್ಮ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಡೆಯುತ್ತಿದೆ. ತಡಗಜೆ – ಬಾಳಿಲ- ಪನ್ನೆ- ದೇರಂಪಾಲು- ಪರ್ಲಡ್ಕ- ಡೆಮ್ಮಲೆ ೬ವಿಭಾಗಗಳ ಕುಟುಂಬಗಳನ್ನೊಳಗೊಂಡ ತಡೆಗಜೆ ತರವಾಡಿಗೆ ಶ್ರೀ ಹೊಸಳಿಗಮ್ಮ ಆಭೀಷ್ಠೆಗಳನ್ನು ನೆರವೇರಿಸುವ ಕಾರಣಿಕದ ಧರ್ಮದೇವತೆಯಾಗಿ ನೆಲೆ ನಿಂತಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.