HomePage_Banner
HomePage_Banner
HomePage_Banner
Breaking News

ಮಂಡೆಕೋಲು ಜಾತ್ರೆಯಲ್ಲಿ ಶಿಷ್ಟ ‘ಅಡ್ಡಣ ಪೆಟ್ಟು’

 

‘ಪೆಟ್ಟಿನ ಉತ್ಸವ’ ಎಂದೇ ಖ್ಯಾತಿ ಯಾದದ್ದು ಮಂಡೆಕೋಲಿನ ಇರುವೆರ್ ಉಳ್ಳಾಕುಲು ನೇಮದ ಸಂದರ್ಭದಲ್ಲಿ ನಡೆಯುವ ‘ಅಡ್ಡಣ ಪೆಟ್ಟು’.
ಮಂಡಕೋಲು ಶ್ರೀ ಮಹಾಷ್ಣು ದೇವಸ್ಥಾನದ ಜಾತ್ರೋತ್ಸವದ ಅಂಗ ವಾಗಿ (ಈ ಬಾರಿ ಎ.೨೬ರಂದು ಶುಕ್ರ ವಾರ) ನಡೆಯುವ ಅಡ್ಡಣಪೆಟ್ಟು ನೆರೆದ ಭಕ್ತರ ಮೈನರೇಳಿಸುತ್ತದೆ. ಹೊಡೆದಾ ಟವೂ ಆರಾಧನೆಯ ಒಂದು ಅಂಗವಾಗಿ ಆಚರಿಸಲ್ಪಡುವ ಅಡ್ಡಣಪೆಟ್ಟು ತುಳು ನಾಡಿನ ಭೂತಾರಾಧನೆಯಲ್ಲೇ ಅತಿ ಶಿಷ್ಟವಾದ ಆಚರಣೆ.


ಧಾರ್ಮಿಕವಾಗಿ ಮಂಡೆಕೋಲನ್ನು ೪ ಪ್ರಧಾನ ಊರುಗಳಾಗಿ ವಿಭಜಿಸ ಲಾಗಿದೆ. ಮಾವಜಿ, ಬೊಳುಗಲ್ಲು, ಕೇನಾಜೆ, ಮುರೂರು. ಈ ೪ ಊರುಗಳ ಗೌಡ ಮನೆತನದ ಪ್ರತಿನಿಧಿಗಳು ಖಾಕಿ ಚಡ್ಡಿ, ಚಡ್ಡಿ ಮೇಲಕ್ಕೆ ಕೆಂಪನೆಯ ಪಟ್ಟಿ, ತಲೆ ಮೇಲೆ ಬಿಳಿ ಮುಂಡಾಸು, ಕೈಗಳಲ್ಲಿ ಬೆತ್ತದ ದಂಡ ಮತ್ತು ತೈಲ ಲೇಪಿತ ಬೆತ್ತದ ಅಡ್ಡಣ ಹಿಡಿದು ಎದುರು ಬದುರು ನಿಂತು ಹೊಡೆದಾಡುವುದು ಕೆಲ ನಿಷಗಳ ಬಳಿಕ ಇರುವೆರ್ ಉಳ್ಳಾಕುಲು ದೈವ ಅಡ್ಡ ಬಂದು ನಿಲ್ಲಿಸುವುದು ಅಡ್ಡಣಪೆಟ್ಟಿನ ಪ್ರಮುಖ ಘಟ್ಟ. ದೈವ ನೇಮದ ಹಿಂದಿನ ದಿನವೇ ಗ್ರಾಮಕ್ಕೆ ದೈವ ಬಂದ ಮೂಲ ಸ್ಥಾನ ಕಳೇರಿಮೂಲೆಯಲ್ಲಿ ವ್ರತಸ್ಥರಾಗಿ ರಾತ್ರಿಯೇ ಮಂಡೆ ಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬಂದು ತಂಗುತ್ತಾರೆ. ಮಾರನೇ ದಿನ ಉಳ್ಳಾಕುಲು ದೈವ ಮುಡಿಯೇರುತ್ತಿ ದ್ದಂತೆ, ದೇವಾಲಯದ ಪಕ್ಕದಲ್ಲೇ ಇರುವ ಗದ್ದೆಯಲ್ಲಿ ಈ ಆಚರಣೆ ನಡೆ ಯುತ್ತದೆ. ಕೆಲವು ನಿಮಿಷಗಳ ಕಾಲ ಈ ಹೊಡೆತ ಬಹಳ ಬಿರುಸಿನಿಂದ ಸಾಗಿ, ನೋಡಲು ನೆರೆದಿದ್ದ ಜನರ ಕುತೂಹಲ ಕೆರಳಿಸಿ, ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಬೆತ್ತ ಹಿಡಿದು ಹೊಡೆದಾಟ ನಡೆಸುವ ಸಂದರ್ಭದಲ್ಲಿ ಅಡ್ಡಣ ಹಿಡಿದು ಅದನ್ನು ತಡೆಯುವರು, ಒಂದು ವೇಳೆ ಹೊಡೆತ ತಾಗಿದರೂ ಅದರಿಂದ ನೋವಾಗುವುದಿಲ್ಲ. ಮಂಡೆಕೋಲು ಶ್ರೀ ಮಾಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಮಾತ್ರ ಈ ರೀತಿಯ ವಿಶೇಷ ಆಚರಣೆ ವೀಕ್ಷಿಸಬಹುದು.
ಹೊಡೆದಾಡಿಕೊಳ್ಳುವವರು ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಲ್ಕು ಮನೆತನದ ಯುವಕರು. ಮಾವಜಿ, ಬೊಳುಗಲ್ಲು, ಕೇನಾಜೆ, ಮುರೂರು ಮನೆತನದ ಪ್ರತಿನಿಧಿಗಳು. ಅಡ್ಡಣ ಪೆಟ್ಟು ನಡೆಯುವುದಕ್ಕಿಂತ ಐದು ದಿನಗಳ ಮುಂಚಿತವಾಗಿ ವೃತ ನೋಡಿ ಇವರು ದೇವಸ್ಥಾನದಲ್ಲಿಯೇ ಕಳೆಯುತ್ತಾರೆ. ಎರಡೂ ಕಡೆಯ ಯೋಧರಂತೆ ವೇಷ ಹಾಕಿದವರು ಪರಸ್ಪರ ಕಾದಾಟಕ್ಕೆ ಪ್ರಾರಂಭಿಸಿದಾಗ. ಬೆನ್ನು ಹಾಕಿ ನಿಂತ ಉಳ್ಳಾಕ್ಲು ದೈವ ತಿರುಗಿ ಬಂದು ಹೊಡೆದಾಟದ ಮಧ್ಯೆ ಮುನ್ನುಗ್ಗಿ ಬಿಡಿ ಸುತ್ತದೆ. ಬಳಿಕ ದೇವಸ್ಥಾನದ ಕೊಡಿಯಡಿಗೆ ತೆರಳುವ ದೈವವನ್ನು ಯೋಧರು ಹಿಂಬಾಲಿಸುತ್ತಾರೆ.
ಇಲ್ಲಿ ಅಡ್ಡಣ ಹೊಡೆತದ ಯೋಧರು ಅನೇಕ ಕ್ರಿಯೆಗಳನ್ನು ಏಕ ಕಾಲದಲ್ಲಿ ಎದುರಿಸಬೇಕಾಗುತ್ತದೆ. ತಮ್ಮ ಅಡ್ಡಣವನ್ನು ಎದೆಯ ಮಟ್ಟಕ್ಕೆ ಎತ್ತಿ ಹಿಡಿದು ಕೆಳಕ್ಕೆ ಬೀಳದಂತೆ ನೋಡಿಕೊಂಡು ಎದುರಿನ ವ್ಯಕ್ತಿಯ ಅಡ್ಡಣಕ್ಕೆ ಶಕ್ತಿಮೀರಿ ಹೊಡೆಯಬೇಕು. ಜೊತೆಗೆ ಆತನ ಹೊಡೆತದಿಂದ ತನ್ನ ದೇಹವನ್ನು ತಪ್ಪಿಸಿಕೊಳ್ಳಬೇಕು.
ಸಂಪ್ರದಾಯದ ಪ್ರಕಾರ ಈ ನಾಲ್ಕೂ ಊರುಗಳು ಎರಡೆರಡು ಪಕ್ಷಗಳಾಗಿ ರೂಪಿಸಲ್ಪಟ್ಟಿವೆ. ದೈವಕ್ಕೆ ಸಂಬಂಧಪಟ್ಟ ಹೆಚ್ಚಿನ ಹಕ್ಕು ಬಾಧ್ಯತೆ ಈ ನಾಲ್ಕೂರಿಗೆ ಸಲ್ಲುತ್ತದೆ. ದೈವದ ನೇಮ ನಡೆಯುವ ದಿನದಂದು ಇವರು ಖಾಕಿ ಚಡ್ಡಿ ಧರಿಸಿ ಅದಕ್ಕೆ ಕೆಂಪು ಪಟ್ಟಿ ಕಟ್ಟಿ, ತಲೆಗೆ ಬಿಳಿ ಮುಂಡಾಸು ಸುತ್ತಿ, ಹಣೆಗೆ ಉದ್ದ ನಾಮ ತೊಟ್ಟು ಭೂತರಾಗಿರುತ್ತಾರೆ. ಇದರೊಂದಿಗೆ ಅಡ್ಡಣಕ್ಕೆ ಎಣ್ಣೆ ಹೊಯ್ದು ಹದವಾಗಿರಿಸಿರುತ್ತಾರೆ.
ಯಾವುದೋ ಕಾಲದಲ್ಲಿ ನಡೆದ ಸಂಘರ್ಷ ಮತ್ತು ಅದನ್ನು ತುಳು ನಾಡಿನ ಸಾಂಸ್ಕೃತಿಕ ವೀರನಾಗಿ ರುವ ಇರುವೆರ್ ಉಳ್ಳಾಕುಲು ದೈವ ಬಂದು ತಡೆದ ಐತಿಹಾಸಿಕ ಘಟನೆಯ ಪಳೆಯುಳಿಕೆಯಂತೆ ಈ ಅಡ್ಡಣಪೆಟ್ಟು ಕಾಣಿಸುತ್ತದೆ. ಈ ಘಟನೆಯು ಸಾಂಕೇತಿಕವಾಗಿ ಪ್ರತಿ ವರ್ಷ ಅವೃತ್ತಿಗೊಂಡು ಮತ್ತೆ ಇಂತಹ ದುರ್ಘ ಟನೆ ನಡೆಯಬಾರದೆಂಬ ಉzಶದಿಂದ ಜನಪದವಾಗಿ ಅಡ್ಡನ ಹೊಡೆತ ಮುಂದು ವರೆದಿರಬೇಕು ಎನ್ನುತ್ತಾರೆ ಹಿರಿಯರು.
ಒಟ್ಟಿನಲ್ಲಿ ಯಾವುದೋ ಒಂದು ಕಾಲದ ಸಾಂಸ್ಕೃತಿಕ ಚರಿತ್ರೆಯನ್ನು ಪ್ರತಿ ಬಿಂಬಿಸುವ ಸಾಂಕೇತಿಕ ನಡಾವಳಿಯಾದ ಅಡ್ಡಣ ಹೊಡೆತ ರೋಮಾಂಚಕ, ಉತ್ಸಾಹಭರಿತ ಹಾಗೂ ಅದ್ಭುತ ಅನುಭವ. ಇದನ್ನು ವೀಕ್ಷಿಸಲು ರಾಜ್ಯದ ಹಾಗೂ ಕೇರಳದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.