HomePage_Banner
HomePage_Banner
HomePage_Banner
Breaking News

ಎ. 26- ಮೇ. 8 ರವರೆಗೆ ಉಬರಡ್ಕ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಮಾಮೂಲು ಪ್ರಕಾರ ಎ. 26 ರಿಂದ ಮೇ. 8 ರವರೆಗೆ ನಡೆಯಲಿರುವುದು.

ಎ. 26 ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯಲಾಗುವುದು. ಮೇ.2 ರಂದು ಸಂಜೆ ಗಂ. 5 ಕ್ಕೆ ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ, ಬಲ್ಲಾಳರ ಕಾಣಿಕೆ, ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ, ಪ್ರಸಾದ ವಿತರಣೆ, ಸಂಕ್ರಾಂತಿ ಪೂಜೆ ನಡೆಯಲಿರುವುದು. ಮೇ. 3 ರಂದು ಸಂಜೆ ಗಂಟೆ 5-3೦ಕ್ಕೆ ಮಿತ್ತೂರು ನಾಯರ್ ಭಂಡಾರ ಬಂದು ಬಂದ್ಯತ್ತ ವಾಲಸಿರಿ, ಮಿತ್ತೂರು ನಾಯರ್‌ಗೆ ಕಿರೀಟವಾಗಿ ಅಡ್ತಲೆ ಕಿರು ಚಾವಡಿಗೆ ಬರುವುದು, ಪ್ರಸಾದ ವಿತರಣೆ, ಸಂಕ್ರಾಂತಿ ಪೂಜೆ ನಡೆಯಲಿರುವುದು.

ಮೇ. 7 ರಂದು ಮಂಗಳವಾರ ರಾತ್ರಿ 2 ಗಂಟೆಗೆ ವಾಲಸಿರಿ ಉಳ್ಳಾಗಳಿಗೆ ಸಿರಿಮುಡಿ ನಾಯರ್‌ಗೆ ಕಿರೀಟವಾಗಿ ಪಡಂಪಾಳಿ ಮಾಳಿಗೆಗೆ ಭಂಡಾರ ಬರುವುದು. ಉಳ್ಳಾಗಳ ದರ್ಶನ, ಪ್ರಸಾದ ವಿತರಣೆ ನಡೆಯಲಿರುವುದು.
ಮೇ. 8 ರಂದು ಬೆಳಿಗ್ಗೆ 8 ಗಂಟೆಗೆ ನಾಯರಿಗೆ ಮಾರಪು, ಮೇಲ್ಮಂಚಕ್ಕೆ ಕಾಯಿ ಒಡೆಯುವುದು, ದೂಳುಕಾಯಿ, ಅಂಬುಕಾಯಿ, ಸ್ನಾನ, ಅಪರಾಹ್ನ ೧ಕ್ಕೆ ಚಾಕಟೆ ಅಡಿಯಲ್ಲಿ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಹರಕೆ, ಪೀಡೆ ಬಿಡಿಸುವುದು, ತೊಡಕ – ಮಡಕ ನಡೆಯಲಿರುವುದು.

ಮೇ. 12 ರಂದು ರಾತ್ರಿ 9 ಗಂಟೆಗೆ ನಡಕಾನಕೊಚ್ಚಿ ಮಾಳಿಗೆಯಲ್ಲಿ ರಾಜಂ ದೈವಕ್ಕೆ ಕೂಡುವುದು, ಉಪದೈವಗಳ ಕೋಲ, ಮೇ. 13ರಂದು ಬೆಳಿಗ್ಗೆ 11 ಗಂಟೆಗೆ ಮಾರಿಕಳಕ್ಕೆ, ಆಮೇಲೆ ಮುಳಿ ನಡೆಯಲಿರುವುದು ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಕೆದಂಬಾಡಿ ವೆಂಕಟ್ರಮಣ ಗೌಡರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.