Breaking News

ಬೇಂಗಮಲೆ ರಸ್ತೆ ಬದಿ ಕೋಳಿತ್ಯಾಜ್ಯ, ಕಸದ ರಾಶಿಯಿಂದ ದುರ್ವಾಸನೆ


ಬೇಂಗಮಲೆ ರಸ್ತೆ ಬದಿಗಳಲ್ಲಿ ಕೋಳಿತ್ಯಾಜ್ಯ, ಕಸದ ರಾಶಿ, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಯಾರೋ ಕಿಡಿಗೇಡಿಗಳು ತಂದು ರಸ್ತೆಬದಿಗಳಲ್ಲಿ ಎಸೆದಿದ್ದು ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೆಲವು ದಿನಗಳ ಹಿಂದೆ ಸ್ವಚ್ಛ ಪರಿಸರದ ಅಂಗವಾಗಿ ಐವರ್ನಾಡು ಗ್ರಾಮದ ನಾಗರಿಕರು ಗ್ರಾಮ ಪಂಚಾಯತ್ ವತಿಯಿಂದ ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಇಡೀ ಬೇಂಗಮಲೆ ರಸ್ತೆ ಬದಿಯನ್ನು ಸುಂದರವಾಗಿ ಸ್ವಚ್ಛಗೊಳಿಸಿದ್ದರು. ಇದರಲ್ಲಿ ಇಡೀ ಗ್ರಾಮದ ಜನರು ಭಾಗವಹಿಸಿದ್ದರು. ಪ್ರತೀ ವಾರ ಒಂದೊಂದು ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಎಷ್ಟು ಬಾರಿ ಸ್ವಚ್ಚಗೊಳಿಸಿದರೂ ಪುನ: ಪುನ: ಬೇಂಗಮಲೆಯಲ್ಲಿ ಕಿಡಿಗೇಡಿಗಳು ಕಸ ತಂದು ಹಾಕುವುದು ನಿಲ್ಲಿಸುವುದಿಲ್ಲ. ಇನ್ನು ಮುಂದೆಯಾದರೂ ಕಸ ಹಾಕುವುದನ್ನು ನಿಲ್ಲಿಸಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.