HomePage_Banner
HomePage_Banner
HomePage_Banner

ಉದ್ದಂಪಾಡಿಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಉದ್ಘಾಟನೆ

ಐವರ್ನಾಡು ಗ್ರಾಮದ ಉದ್ದಂಪಾಡಿಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯು ಎ.21 ರಂದು ಉದ್ಘಾಟನೆಗೊಂಡಿತು.
ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಗಿರಿಧರ ನಾಯ್ಕ, ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ, ಹಾಗೂ ಪ್ರದಾನ ಕಾರ್ಯದರ್ಶಿ ಕೆ.ಕೆ.ನಾಯ್ಕ, ಸಂಘಟನೆ ಸಂಚಾಲಕ ಮೋಹನ್ ಕುಮಾರ್, ಪುತ್ತೂರು ಕುದ್ಪಾಜೆ ಗ್ರಾಮ‌‌ ಅಧ್ಯಕ್ಷ ಶಶಿಕುಮಾರ್, ತಾ.ಮಹಿಳಾ ಉಪಾಧ್ಯಕ್ಷೆ ಸುಮಿತ್ರ ಕುದ್ಪಾಜೆ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ರೇಖಾ ಉದ್ದಂಪಾಡಿ, ಹಿರಿಯರಾದ ರಾಮಣ್ಣ ನಾಯ್ಕ ಉದ್ದಂಪಾಡಿಯವರಿಂದ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಉದ್ಘಾಟನೆಗೊಂಡಿತು.
ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಮತ್ತು ತಾ.ಅಧ್ಯಕ್ಷ ಸುಂದರ ಪಾಟಾಜೆ ಯವರನ್ನು ಸನ್ಮಾನಿಸಲಾಯಿತು. ಉದ್ದಂಪಾಡಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಮಂಜುನಾಥ ಎಸ್. ಶಾಂತಿಮೂಲೆ, ಉಪಾಧ್ಯಕ್ಷರಾಗಿ ಚಿದಾನಂದ ಉದ್ದಂಪಾಡಿ, ಕಾರ್ಯದರ್ಶಿಯಾಗಿ ಗಂಗಾಧರ ಶಾಂತಿಮೂಲೆ, ಖಜಾಂಜಿಯಾಗಿ ನಾರಾಯಣ ಶಾಂತಿಮೂಲೆ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಮತಾ ಉದ್ದಂಪಾಡಿ , ಉಪಾಧ್ಯಕ್ಷೆಯಾಗಿ ಹೇಮಾವತಿ ಉದ್ದಂಪಾಡಿ, ಕಾರ್ಯದರ್ಶಿಯಾಗಿ ಗಾಯತ್ರಿ ಶಾಂತಿಮೂಲೆ, ಖಜಾಂಜಿಯಾಗಿ ಪುಷ್ಪಾವತಿ ಉದ್ದಂಪಾಡಿ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.