Breaking News

ಎನ್.ಎಂ.ಸಿ ಸಿಬ್ಬಂದಿ ಗಣೇಶ ಡಿ. ನಿವೃತ್ತಿ

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಬೆರಳಚ್ಚುಗಾರರಾಗಿ ಸೇವೆಸಲ್ಲಿಸುತ್ತಿರುವ ಗಣೇಶ ದೇರ್ಲರವರು ಎ.20 ರಂದು ನಿವೃತ್ತಿಹೊಂದಲಿದ್ದಾರೆ. 1959 ರ ಎ.14 ರಂದು ದಿ.ದೇರ್ಲ ಕೂಸಪ್ಪ ಗೌಡ ಮತ್ತು ದಿ. ಶಿವಮ್ಮ ದಂಪತಿಗಳ ಮಗನಾಗಿ ಜನಿಸಿದ ಗಣೇಶರವರು ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಇಂಗ್ಲೀಷ್, ಕನ್ನಡ ಟೈಪ್ ರೈಟಿಂಗ್, ಇಂಗ್ಲೀಷ್ ಜೂನಿಯರ್ ಶಾರ್ಟ್‌ಹ್ಯಾಂಡ್ ತರಬೇತಿಯನ್ನು ಪಡೆದು ಬಳಿಕ 1976 ಆಗಸ್ಟ್‌ನಿಂದ 1977ರ ಮಾರ್ಚ್ ತಿಂಗಳ ವರೆಗೆ ಪೆರ್ಲಂಪಾಡಿ ಅಂಚೆ ಕಛೇರಿಯಲ್ಲಿ ಇಲಾಖೇತರ ನೌಕರನಾಗಿ ಸೇವೆ ಸಲ್ಲಿಸಿ ಬಳಿಕ 1981 ಜನವರಿ 14ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಬೆರಳಚ್ಚುಗಾರನಾಗಿ ಸೇವೆಗೆ ಸೇರ್ಪಡೆಗೊಂಡು ಸುಮಾರು 38 ವರ್ಷ ಸೇವೆ ಸಲ್ಲಿಸಿ ಎ.30 ರಂದು ನಿವೃತ್ತರಾಗಲಿದ್ದಾರೆ. ಇವರ ಪತ್ನಿ ಶ್ರೀಮತಿ ಸುಶೀಲಾ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಸಚಿನ್ ಡಿ.ಜಿ. ಎಂ.ಟೆಕ್ ಸ್ನಾತಕೋತ್ತರ ಪದವಿಯನ್ನು ಪಡೆದು EASI Allegis Service ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಕು. ಸಜನಿ ಡಿ.ಜಿ ಪುತ್ತೂರಿನ ವಿವಾಕಾನಂದ ಕಾಲೇಜಿನಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.