Breaking News

ಗೋಂಟಡ್ಕದಲ್ಲಿ ಅಪಘಾತ : ಯುವಕ ಮೃತ್ಯು


ಜೀಪು ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ತೀವ್ರ ಜಖಂಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ದುಗಲಡ್ಕ ಬಳಿಯ ಗೋಂಟಡ್ಕದಲ್ಲಿ ಇದೀಗ ನಡೆದಿದೆ.


ಮರ್ಕಂಜದಿಂದ ಸುಳ್ಯ ಕಡೆಗೆ ಬರುತ್ತಿದ್ದ ಜೀಪು ಮತ್ತು ದುಗಲಡ್ಕ ಕಡೆಗೆ ಹೋಗುತ್ತಿದ್ದ ಬೈಕ್ ಗೋಂಟಡ್ಕದಲ್ಲಿ ಢಿಕ್ಕಿ ಹೊಡೆದವು. ಪರಿಣಾಮವಾಗಿ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಚಾಲಕ ತಲೆಗೆ ತೀವ್ರ ಏಟು ತಗುಲಿ ಸ್ಥಳದಲ್ಲೇ ಮೃತರಾದರು. ಬೈಕ್ ಜೀಪಿನ ಅಡಿಭಾಗದಲ್ಲಿ ಸಿಲುಕಿಕೊಂಡಿದೆ. ಮೃತಪಟ್ಟ ಯುವಕ ಬೊಳುಬೈಲಿನ ರಾಜಕುಮಾರ್ ಎಂದು ಹೇಳಲಾಗುತ್ತಿದೆ. ಅವರ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗುತ್ತಿದೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.