HomePage_Banner
HomePage_Banner

ವಿನೋಬನಗರ: ವಿವೇಕಾನಂದ ಪ್ರೌಢಶಾಲೆಗೆ ಶೇ.97 ಫಲಿತಾಂಶ

ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.97 ಫಲಿತಾಂಶ ದಾಖಲಾಗಿದೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 31 ಮಂದಿ ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.97 ಫಲಿತಾಂಶ ದಾಖಲಾಗಿದೆ.
ಒಟ್ಟು 18 ಬಾಲಕರಲ್ಲಿ ಎಲ್ಲಾ 18 ಮಂದಿ ಬಾಲಕರು ಹಾಗೂ 13 ಬಾಲಕಿಯರಲ್ಲಿ 12 ಬಾಲಕರು ಉತ್ತೀರ್ಣರಾಗಿದ್ದು 4 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಾಲ್ಸೂರು ಗ್ರಾಮದ ಕುಕ್ಕಂದೂರು ಹುಲಿಮನೆ ಉಮೇಶ್ ಗೌಡ ಮತ್ತು ಶ್ರೀಮತಿ ನಳಿನಿ ದಂಪತಿಯ ಪುತ್ರ ವಿದಾತ್ ಹೆಚ್.ಯು. (554), ಮಂಡೆಕೋಲು ಗ್ರಾಮದ ಕಲ್ಲಡ್ಕ ವಿಶ್ವನಾಥ ಕೆ. ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಪುತ್ರ ಕಾರ್ತಿಕ್ ಕೆ.ವಿ.(552), ಕನಕಮಜಲು ಗ್ರಾಮದ ಕೊರಂಬಡ್ಕ ಈಶ್ವರ ಮತ್ತು ಶ್ರೀಮತಿ ಮಂಜುಳ ದಂಪತಿಯ ಪುತ್ರ ಇಂದಿರೇಶ್(548), ಮಂಡೆಕೋಲು ಗ್ರಾಮದ ನೀರ್ಪಾಡಿ ಯೋಗೀಶ ಎನ್.ವೈ ಮತ್ತು ಶ್ರೀಮತಿ ಭಾರತಿ ಎನ್.ವೈ. ದಂಪತಿಯ ಪುತ್ರಿ ಕು.ಅಕ್ಷಿತಾ ಎನ್.ವೈ.(543) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಸೋಣಂಗೇರಿಯ ಹೊಸೊಳಿಕೆ ರವೀಂದ್ರ ಮತ್ತು ಶ್ರೀಮತಿ ರಂಜಿನಿ ದಂಪತಿಯ ಪುತ್ರಿ ಕು. ಚರೀಷ್ಮಾ (523), ಕನಕಮಜಲು ಗ್ರಾಮದ ಕೊಲ್ಲಂತಡ್ಕ ದೇವಿಪ್ರಸಾದ್ ಕೆ.ವಿ. ಮತ್ತು ಶ್ರೀಮತಿ ಲೋಲಾಕ್ಷಿ ದಂಪತಿಯ ಪುತ್ರ ಆಶೀಶ್ (511), ಜಾಲ್ಸೂರು ಗ್ರಾಮದ ನೆಕ್ರಾಜೆ ಚಂದ್ರಶೇಖರ ಮತ್ತು ಶ್ರೀಮತಿ ಕವಿತ ದಂಪತಿಯ ಪುತ್ರಿ ಕು. ಕಾವ್ಯಶ್ರೀ(510), ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಪದವು ವೇಣುಗೋಪಾಲ ಮತ್ತು ಶ್ರೀಮತಿ ಆಶಾಕುಮಾರಿ ದಂಪತಿಯ ಪುತ್ರಿ ಕು. ಕೃಪಾ(500) ಅಂಕ ಪಡೆದು ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

About The Author

Related posts

1 Comment

  1. Supriya Gowda Nagana

    Congratulations dear brothers sister’s and teachers… I really miss my favorite high school..

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.