HomePage_Banner
HomePage_Banner
HomePage_Banner

ಹೊಲೋ ಬ್ಲಾಕ್ ಸಂಸ್ಥೆಯಿಂದ ಶಬ್ಧ ಮಾಲಿನ್ಯ, ಪರಿಸರ ಮಾಲಿನ್ಯ – ತೆರವಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ


ಸುಳ್ಯ ನಗರದ ಭಸ್ಮಡ್ಕ ಎಂಬಲ್ಲಿ ಮನೆಗಳ ನಡುವಿನಲ್ಲಿ ಇರುವ ಹೊಲೋ ಬ್ಲಾಕ್ ಸಂಸ್ಥೆಯಿಂದ ಪರಿಸರ ಹಾಗೂ ಶಬ್ಧ ಮಾಲಿನ್ಯದಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

ಕುರುಂಜಿಭಾಗ್‌ನಲ್ಲಿ ಗಂಗಾಧರ್ ಎಂಬವರು ಕೆಲವು ವರ್ಷಗಳಿಂದ ಹೊಲೋ ಬ್ಲಾಕ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಹೊಲೋ ಬ್ಲಾಕ್ ಯುನಿಟನ್ನು ಯಂತ್ರಗಳ ಮೂಲಕ ತಯಾರಿಸುತ್ತಿರುವುದರಿಂದ ತೀವ್ರವಾದ ಶಬ್ಧ ಬರುತ್ತಿದೆಯಲ್ಲದೆ, ಅದರಿಂದ ಬರುವ ಧೂಳಿನಿಂದ ಪರಿಸರ ಹಾಳಾಗುತ್ತಿದೆ. ಇದನ್ನು ಇಲ್ಲಿಂದ ತೆರವು ಮಾಡಬೇಕೆಂದು ಒತ್ತಾಯಿಸಿ ಹೊಲೋ ಬ್ಲಾಕ್ ಸಂಸ್ಥೆಯ ಎಡ ಮತ್ತು ಬಲ ಬದಿಯಲ್ಲಿರುವ ೨ ಮನೆಯವರಾದ ಗಂಗಾಧರ ಕೆ. ಮತ್ತು ಗಣೇಶ್ ಪ್ರವೀಣ ಎಂಬವರು ಹಾಗೂ ಅವರ ಪತ್ನಿಯರು ಮತ್ತು ಮಕ್ಕಳು ಮೇ. ೬ರಂದು ಪ್ರತಿಭಟನೆ ನಡೆಸಿದರು.

ಹೊಲೋ ಬ್ಲಾಕ್ ಸಂಸ್ತೆಯ ಎದುರು ಕುಳಿತು ಇದನ್ನು ತೆರವು ಮಾಡಬೇಕೆಂದು ಆಗ್ರಹಿಸಿದರು. “ನಾವು ಪ್ರತಿನಿತ್ಯ ಈ ಸಂಸ್ತೆಯಿಂದ ಹೊರಬರುವ ಧೂಳು ತಿಂದು ಆರೋಗ್ಯ ಕೆಡುವ ಸ್ಥಿತಿ ಇದೆ. ರಾತ್ರಿ ಹಗಲೆನ್ನದೆ ಶಬ್ಧಗಳು ಬರುತ್ತಿವೆ. ಇದರಿಂದ ನಮಗೆ ವಾಸ ಮಾಡಲು ತೊಂದರೆಯಾಗುತ್ತದೆ. ಇದನ್ನು ಇಲ್ಲಿಂದ ತೆರವು ಮಾಡುವ ತನಕ ನಾವು ಪ್ರತಿಭಟಿಸುತ್ತೇವೆ. ನಗರ ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿ ತನಕ ದೂರು ನೀಡಿದ್ದೇವೆ. ಆದರೂ ಫಲ ಕಂಡಿಲ್ಲ. ಅಧಿಕಾರಿಗಳು ಬಂದು ಹೋಗಿದ್ದಾರಷ್ಟೆ ಎಂದು ಪ್ರತಿಭಟನೆ ನಡೆಸುತ್ತಿರುವ ಗಣೇಶ ಪ್ರವೀಣ ಹಾಗೂ ಗಂಗಾಧರ ಕೆ. ಸುದ್ದಿಗೆ ತಿಳಿಸಿದ್ದಾರೆ.

ಈ ಕುರಿತು ಹೊಲೋ ಬ್ಲಾಕ್ ಸಂಸ್ಥೆಯ ಮಾಲಕ ಗಂಗಾಧರ ಕುರುಂಜಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ ನಾವು ೯ ವರ್ಷಗಳ ಹಿಂದೆ ಸಂಸ್ಥೆ ಆರಂಭಿಸುವಾಗ ಕಾನೂನು ರೀತಿಯಲ್ಲಿ ಏನೆಲ್ಲಾ ಆಗಬಬೇಕು ಅದೆಲ್ಲವನ್ನೂ ಮಾಡಿ ಸಂಸ್ಥೆ ಆರಂಭಿಸಿದ್ದೇವೆ. ಅಧಿಕಾರಿಗಳು ಕೂಡಾ ಬಂದು ನೋಡಿದ ಬಳಿಕವೇ ನಮಗೆ ಅನುಮತಿ ನೀಡಿದ್ದರು. ಸಂಸ್ಥೆ ಆರಂಭಿಸುವಾಗ ಪಕ್ಕದಲ್ಲಿ ಮನೆಗಳಿರಲಿಲ್ಲ. ಆ ಬಳಿಕ ಒಂದೊಂದೇ ಮನೆಗಳಾದವು. ಇದೀಗ ನಮ್ಮ ಸಂಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಾವು ಅದನ್ನು ಏಕಾಏಕಿ ನಿಲ್ಲಿಸಿದರೆ ಜೀವನಕ್ಕೆ ಏನು ಮಾಡಬೇಕು ಮ್ತು ಅದನ್ನು ಎಲ್ಲಿಗೆ ಸ್ಥಳಾಂತರಿಸುವುದು? ಆದ್ದರಿಂದ ಕೆಲವು ಸಮಯ ನಮಗೆ ಅವಕಾಶ ಬೇಕು ಎಂದು ಅಧಿಕಾರಿಗಳನ್ನು ವಿನಂತಿಸಿದ್ದೇವೆ ಮತ್ತು ಅದನ್ನು ಸ್ಥಳಾಂತರ ಮಾಡುವ ಸಂದರ್ಭ ದಾಖಲೆ ಪತ್ರಗಳು ಆಗುವಂತೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

About The Author

Related posts

1 Comment

 1. Varsha

  Respected sir /madam
  I am here by talking about the matter of hollow blocks. Sir, please make it as inter- lock industry.
  From 9 years inter lock is done from that industry
  In the year 2018 in the middle of the year they have brought hollow blocks machine. But because of its sound the neighbour had complained. So the hollow block making machine was stopped in the same month that they have brought. Sir please I am requesting you to rename it as interlock.

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.