HomePage_Banner
HomePage_Banner
HomePage_Banner
Breaking News

ಡಾ.ಲೀಲಾಧರ್ ಡಿ.ವಿ.ಯವರ ‘ಶ್ರೀ ವಿಷ್ಣು’ ಗೃಹ ಪ್ರವೇಶ ಮತ್ತು ಗುರು ಪ್ರವೇಶ-ಆದಿಚುಂಚನಗಿರಿ ನಿರ್ಮಲಾನಂದ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯ

ಸುಳ್ಯ ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜು ಆಡಳಿತಾಧಿಕಾರಿ ಡಾ.ಲೀಲಾಧರ್ ಡಿ.ವಿ.ಯವರು ಕುರುಂಜಿಭಾಗ್‌ನಲ್ಲಿ ನೂತನವಾಗಿ ನಿರ್ಮಿಸಿದ ‘ಶ್ರೀ ವಿಷ್ಣು’ ಗೃಹ ಹಾಗೂ ಗೃಹಸಮುಚ್ಚಯದ ಪ್ರವೇಶ ಮತ್ತು ಗುರು ಪ್ರವೇಶ ಕಾರ್ಯಕ್ರಮವು ವೈಭವ ಪೂರ್ಣವಾಗಿ ನೆರವೇರಿತು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆವರು, ಸಂತರು ಇಲ್ಲಿಗೆ ಬಂದಿರುವುದು ದೊಡ್ಡ ಮನೆ ಮತ್ತು ಅವರು ಶ್ರೀಮಂತರು ಅನ್ನುವ ಕಾರಣಕ್ಕೆ ಅಲ್ಲ. ಪ್ರಾಪಂಚಿಕ ಬದುಕಿನ ಮಧ್ಯೆಯೂ ಈ ಸಹೋದರರು ಸಂತರ ನಡುವೆ ಉತ್ತಮ ಸಂಬಂದ್ದ ಇಟ್ಟುಕೊಂಡಿದ್ದಾರೆ. ನಮ್ಮತನ ಕಳೆದುಕೊಳ್ಳದ ಸತ್ಸಂಗ ಮತ್ತು ಸಂಸರ್ಗದಿಂದ ಒಳ್ಳೆಯ ಸಂಸ್ಕಾರ ಮೂಡುತ್ತದೆ ಎಂದು ಹೇಳಿದರು.
ಸಂತರನ್ನು ಕರೆಸಿ, ಬಂಧು ಮಿತ್ರರನ್ನು ಬರಮಾಡಿ ಶ್ರಮದ ಬದುಕಿನ ಮನೆಯನ್ನು ತೋರಿಸಿದ ಆವರ ಕಾರ್ಯ ವಿಶೇಷವಾದದು ಎಂದು ಮಹಾಸ್ವಾಮೀಗಳು ಶ್ಲಾಘಿಸಿದರು.
ವಿವಿಧ ಶಾಖಾ ಮಠಗಳ ಮಠಾಧೀಶರಾದ ಧರ್ಮಪಾಲನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಶಿವಾನಂದನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್ ಉಪಸ್ಥಿತರಿದ್ದರು.
ಕೆ.ಆರ್. ಗಂಗಾಧರ್ ಪ್ರಸ್ತಾವನೆ ಗೈದರು, ಡಾ.ಲೀಲಾಧರ್ ಡಿ.ವಿ, ಸತೀಶ್ ಡಿ.ವಿ, ಡಿ.ಕೆ. ವೀರಪ್ಪ ಗೌಡ ದಂಪತಿಗಳು ಅತಿಥಿಗಳನ್ನು ಸ್ವಾಗತಿಸಿದರು.
https://youtu.be/GyRLRo7zYZE?t=11

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.