HomePage_Banner
HomePage_Banner
HomePage_Banner

ಸುಳ್ಯ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನ ನೂತನ ಪ್ರಾಚಾರ‍್ಯರಾಗಿ ಶ್ರೀಮತಿ ಹರಿಣಿ ಪುತ್ತೂರಾಯ ನೇಮಕ

 

ಎ.ಓ.ಎಲ್.ಇ(ರಿ) ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸುಳ್ಯ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಶ್ರೀಮತಿ ಹರಿಣಿ ಪುತ್ತೂರಾಯ ನೇಮಕಗೊಂಡಿರುತ್ತಾರೆ.


ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್, ಪಿಜಿಡಿಬಿಎಂ (Post graduate diploma in businesses management) ಇಂಗ್ಲೀಷ್ ಹಾಗೂ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿ, ಎಂ.ಬಿ.ಎ(ಹೆಚ್.ಆರ್), ಡಿ.ಫಾರ್ಮ, ಹಿಂದಿ ಪ್ರವೀಣ್ ಪದವಿಗಳನ್ನು ಪಡೆದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ 19 ವರ್ಷಗಳ ಬೋಧನಾನುಭವವನ್ನು ಹೊಂದಿರುವ ಇವರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರ್, ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೦ ವರ್ಷಗಳ ಕಾಲ ಸೇವೆ ಮತ್ತು ನರೇಂದ್ರ ಪಿಯು ಕಾಲೇಜು ಪುತ್ತೂರಿನಲ್ಲಿ 1 ವರ್ಷ ಪ್ರಾಚಾರ‍್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಮೂಲತ ಪುತ್ತೂರಿನವರಾದ ಇವರು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದು , ಹಲವಾರು ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಪುತ್ತೂರಿನ ಹೆಸರಾಂತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರ ಸಹೋದರಿ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.