HomePage_Banner
HomePage_Banner
HomePage_Banner
HomePage_Banner
Breaking News

ಪೈಲಾಜೆ : ದುರ್ಗಮ ಪ್ರದೇಶದಲ್ಲಿ ಮುರುಕಲು ಜೋಪಡಿಯಲ್ಲಿ-ಅಕ್ಕ-ತಮ್ಮ ವಾಸ : ಅಕ್ರಮ ಸಕ್ರಮವೂ ಆಗಿಲ್ಲ-ಮನೆಯೂ ದೊರೆತಿಲ್ಲ

ಬಡತನ ಮತ್ತು ನಮ್ಮ ವ್ಯವಸ್ಥೆಯ ಅನಾದರವಿದ್ದರೆ ಎಂತಹ ಪರಿಸ್ಥಿತಿಯಲ್ಲಿ ಜೀವನ ಸಾಗಿಸಬೇಕೆಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. ದುರ್ಗಮವಾದ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಸಿದ ಜೋಪಡಿಯಲ್ಲಿ ಅಕ್ಕ ಮತ್ತು ತಮ್ಮ ವಾಸವಿದ್ದು, ಅವರಿಗೆ ಪಂಚಾಯತಿನಿಂದ ಮನೆಯೂ ದೊರೆತಿಲ್ಲ-ಕಂದಾಯ ಇಲಾ ಖೆಯಿಂದ ಅಕ್ರಮ ಸಕ್ರಮ ಕಡತವೂ ಮಂಜೂರಾಗಿಲ್ಲ.
ಈಗ ಕಡಬ ತಾಲೂಕಿಗೆ ಸೇರಿರುವ ಸುಳ್ಯ ತಾಲೂಕಿನ ಐನಕಿದು ಗ್ರಾಮದ ಪೈಲಾಜೆ ಎಂಬಲ್ಲಿ ಇವರ ಮನೆಯಿದೆ. ಯೇನೆಕಲ್ ಗ್ರಾಮದ ಕಲ್ಲಾಜೆಯಿಂದ ೪ ಕಿ.ಮೀ. ನಡೆದು ಹೋಗಬೇಕು. ಮನೆಯವರೆಗೆ ಹೋಗಲು ಸರಿ ಯಾದ ದಾರಿಯೂ ಇಲ್ಲ. ಅಷ್ಟು ದುರ್ಗಮವಾಗಿದೆ. ಜನವಸತಿಯಿಂದ ಬಹುದೂರ ಒಂಟಿ ಯಾಗಿರುವ ಈ ಗುಡಿಸಲಿನಲ್ಲಿರುವ ಅಕ್ಕ ಪದ್ಮಾವತಿ ಪ್ರತಿದಿನ ಸುಳ್ಯಕ್ಕೆ ಕೊರಿಯರ್ ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಬರುತ್ತಾರೆ. ತಮ್ಮ ಕೇಶವ ಸುಬ್ರಹ್ಮಣ್ಯದ ವಸತಿಗೃ ಹವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಕ ಬೆಳಿಗ್ಗೆ ಮನೆಬಿಟ್ಟು ಸಂಜೆ ಮನೆ ಸೇರುತ್ತಾರೆ. ತಮ್ಮ ಮಧ್ಯಾಹ್ನ ಮನೆ ಬಿಟ್ಟು ಮರುದಿನ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಬರುತ್ತಾರೆ. ರಾತ್ರಿ ಆ ಕಾರ್ಗತ್ತಲಲ್ಲಿ ೩೦ರ ಹರೆಯದ ಅಕ್ಕ ಒಬ್ಬರೇ ಮನೆಯಲ್ಲಿರುತ್ತಾರೆ. ಅವರ ಮಾನಸಿಕ ಸ್ಥೈರ್ಯವನ್ನು ಊಹಿಸಿ ನೋಡಿ.
ತಂದೆ ಲಿಂಗಪ್ಪ ಗೌಡರು ೨೦೧೦ರಲ್ಲಿ ನಿಧನರಾದರು. ತಾಯಿ ಸುಂದರಿಯವರು ಕಾಯಿಲೆ ಬಿದ್ದು ೨೦೧೧ರಲ್ಲಿ ಕೊನೆಯುಸಿರೆಳೆದರು. ಅಂದಿನಿಂದ ಅಕ್ಕ-ತಮ್ಮ ಇಬ್ಬರೇ ಇದ್ದಾರೆ. ಅವರ ಮನೆಗೆ ಒಂದು ಬದಿಯಲ್ಲಿ ಮಣ್ಣಿನ ಗೋಡೆಯಿದೆ. ಇನ್ನೊಂದುಬದಿಗೆ ಎರಡು ಕಂಬ ನೆಡೆಲಾಗಿದೆ. ಮಳೆ-ಬಿಸಿಲು ಬೀಳದಂತೆ ಪ್ಲಾಸ್ಟಿಕ್ ಹೊದಿಸಲಾಗಿದೆ. ಪಕ್ಕದಲ್ಲೆ ನಾಯಿ ಗೂಡು ಇದೆ. ಸ್ನಾನದ ಕೊಠಡಿ ಕೂಡ ಇದೆ. ಆದರೆ ಶೌಚಾಲಯ ಇಲ್ಲ. ಮನೆಯ ಒಳ ಹೊಕ್ಕು ನೋಡಿದರೆ ಅದು ಮನೆಯಂತೆ ಭಾಸವಾಗುವುದಿಲ್ಲ. ಮೇಲಕ್ಕೆ ಹೊದಿಸಿದ ಟರ್ಪಾಲು ಕೂಡಾ ಜೋತುಬಿದ್ದು ಅಲ್ಲಲ್ಲಿ ಹರಿದಿದೆ. ಗೋಡೆ ದುರ್ಬಲಗೊಂಡಿದೆ. ಜೋರಾಗಿ ಮಳೆ ಬಂದರೆ ಜೀವ ರಕ್ಷಿಸಿಕೊಳ್ಳಲು ಮನೆಯ ಹೊರಗಡೆ ಬರಬೇಕು. ಅಥವಾ ಕಟ್ಟಿಗೆ ಇಡಲು ಮಾಡಿದ ಮಾಡಿನ ಕೆಳಗಡೆ ನಿಂರುಕೋಳ್ಳಬೇಕು.
ಅಕ್ರಮ ಸಕ್ರಮವೂ ಆಗಿಲ್ಲ : ಈ ಕುಟುಂಬದ ಸ್ವಾಧೀನದಲ್ಲಿ ಸುಮಾರು ಎರಡು ಎಕ್ರೆಯಷ್ಟು ಸರಕಾರಿ ಭೂಮಿ ಇದೆ. ಲಿಂಗಪ್ಪ ಗೌಡರು ಹಿಂದೆ ಅದಕ್ಕೆ ಅಕ್ರಮ ಸಕ್ರಮದಲ್ಲಿ ಅರ್ಜಿ ಹಾಕಿದ್ದರು. ಆದರೆ ಆದರ ಹಿಂದೆ ಹೋಗಲಾಗದೆ, ಆ ಅರ್ಜಿಯ ಸುದ್ದಿಯೇ ಇಲ್ಲದಂತಾಗಿದೆ. ಈಗ ಪದ್ಮಾವತಿಯವರ ಹೆಸರಲ್ಲಿ ೫ ಸೆಂಟ್ಸ್ ಸ್ಥಳ ೯೪ಸಿಯಲ್ಲಿ ಆಗಿದೆ. ಹಕ್ಕುಪತ್ರವೂ ಸಿಕ್ಕಿದೆ. ಇನ್ನು ಪಂಚಾಯತು ಮನೆ ಮಂಜೂರು ಮಾಡಬೇಕಾಗಿದೆ.  ಇತ್ತೀಚೆಗೆ ಹರಿಹರಪಲ್ಲತಡ್ಕ ಗ್ರಾ.ಪಂ. ಅಧ್ಯಕ್ಷ ಹಿಮ್ಮತ್ ಕೆ.ಸಿ.ಯವರ ಸಹಕಾರ ಪಡೆದು, ಮನೆ ಕಟ್ಟಲು ಸಮತಟ್ಟು ಗೊಳಿಸುವ ಹಾಗೂ ಕಷ್ಟದಲ್ಲಾದರೂ ವಾಹನ ಸಾಗಬಹುದಾದ ರೀತಿಯಲ್ಲಿ ರಸ್ತೆಯೊಂದನ್ನು ಜೆಸಿಬಿ ಮೂಲಕ ಸಹೋದರ-ಸಹೋದರಿ ನಿರ್ಮಿಸಿದ್ದಾರೆ. ಅಭಿವೃದ್ಧಿ ಆಗಬೇಕು-ಹೊಸ ಬದುಕು ಕಟ್ಟಿಕೊಳ್ಳಬೇಕು ಎಂಬ ತುಡಿತ ಇವರಲ್ಲಿದೆ. ಆದರೆ ಆರ್ಥಿಕ ಶಕ್ತಿ ಇಲ್ಲದಾಗಿದೆ. ಕಂದಾಯ ಇಲಾಖೆ ಇವರಿಗೆ ಜಾಗ ಮಂಜೂರು ಮಾಡಬೇಕು. ಪಂಚಾಯತು ಮನೆ ನೀಡಬೇಕು. ಊರವರು ಸಹರಿಸಬೇಕು ಅಷ್ಟೆ.

ಭಾಗ್ಯ ಜ್ಯೋತಿಯ ಭಾಗ್ಯವಿಲ್ಲ, ವಿದ್ಯುತ್ ಕೊಡದಿದ್ದರೂ ಮೀಟರ್ ಅಳವಡಿಸಲಾಗಿದೆ
ಭಾಗ್ಯ ಜ್ಯೋತಿ ಯೋಜನೆಯಲ್ಲಿ ಮನೆಗೆ ವಿದ್ಯುತ್ ಸಂಪರ್ಕದ ಮೀಟರ್ ನ್ನು ೨೦೧೩ ರಲ್ಲಿ ಜೋಡಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕೊಟ್ಟೇ ಇಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿ ವಿದ್ಯುತ್ ಕಂಬಗಳಿದ್ದರೂ ಇವರ ಮನೆ ಬಳಿಗೆ ವಿದ್ಯುತ್ ಬರಲೇ ಇಲ್ಲ. ಇಲ್ಲೂ ವಿಶೇಷವೆಂದರೆ ಸಾಧಾರಣವಾಗಿ ಮನೆಯೊಂದಕ್ಕೆ ವಿದ್ಯುತ್ ಮೀಟರ್ ಅಳವಡಿಸಬೇಕಾದರೆ ಅಲ್ಲಿಗೆ ವಿದ್ಯುತ್ ಸಂಪರ್ಕ ಆಗಿರಬೇಕು. ಆದರೆ ಇಲ್ಲಿ ಮೀಟರ್ ಇದೆ. ವಿದ್ಯುತ್ ಇಲ್ಲ. ವಿದ್ಯುತ್ ಸಂಪರ್ಕ ದೊರಕಿಸಿಕೊಳ್ಳಲು ಓಡಾಡಲು ಇವರ ಬಳಿ ಹಣವೂ ಇಲ್ಲ ಸಮಯನೂ ಇಲ್ಲ. ಹೀಗಾಗಿ ರಾತ್ರಿ ಕತ್ತಲೆಯಲ್ಲಿ ಭಯ ಭೀತಿಯಿಂದ ಚಿಮಿಣಿ ದೀಪದ ಬೆಳಕಿನಲ್ಲಿ ಒಂಟಿ ಯುವತಿಯ ವಾಸ. ಮಳೆಗಾಲ ಗುಡುಗು ಮಿಂಚು ಮಳೆಗೆ ಇದೇ ಜೋಪಡಿಯಲ್ಲೆ ಜೀವನ ಕಳೆಯುವುದು.
ಸಂಘಸಂಸ್ಥೆಯವರ ಸಹಾಯ ಬೇಕು : ಈ ಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳಿವೆ. ಸಾಕಷ್ಟು ಸಹಾಯ ಹಸ್ತ ಚಾಚಿದ ಸಂಘಗಳಿವೆ. ಇತ್ತೀಚೆಗೆ ನಡೆದ ಹರಹರೇಶ್ವರನ ಬ್ರಹ್ಮಕಲಶಕ್ಕೆ ಊರಿಗೆ ಊರೇ ಸಂಭ್ರಮ ಪಟ್ಟಿದೆ. ಆ ಸಂದರ್ಭ ಇಲ್ಲಿನವರು ದುಡಿದದ್ದು ನೋಡಿದರೆ ಈ ದಿಕ್ಕು ತೋಚದ ಮನೆಯಲ್ಲಿ ಸಂಭ್ರಮ ಬರುವಂತೆ ಮಾಡುವುದು ದೊಡ್ಡ ವಿಷಯವೇನಲ್ಲ. ಅದಕ್ಕಾಗಿ ಈ ಭಾಗದ ಸಂಘ ಸಂಸ್ಥೆಗಳು ಮುಂದೆ ಬಂದು ಬೆರೆ ಕೆಲ ಗ್ರಾಮಗಳಲ್ಲಿ ಮಾಡಿದಂತೆ ಸರ್ಕಾರದಿಂದ ಕೊಡಮಾಡುವ ಯೋಜನೆಯನ್ನು ಉಪಯೋಗಿಸಿ, ಅನುಷ್ಠಾನ ಗೊಳಿಸಿ ಈ ಮನೆಯಲ್ಲೂ ಬೆಳಕು ಹರಿಸುವ ಕೆಲಸ ಮಾಡಿ ಪುಣ್ಯದ ಕೆಲಸ ಮಾಡಬೇಕು. ಆ ಮೂಲಕ ಶಾಶ್ವತವಾಗಿ ಊರವರು ನೆನಪಿಸುವಂತಹ ಕಾರ್ಯ

ನೀವು ಸಹಾಯ ಮಾಡಬಲ್ಲಿರಾ : ಈ ಮನೆಯ ಸಹೋದರ ಸಹೋದರಿಯರು ಈ ನರಕ ಯಾತನೆಯಿಂದ ಹೊರಬರಲು ಸಾರ್ವಜನಿಕರು ಮನಸ್ಸು ಮಾಡಬೇಕು. ನಮ್ಮ ಕೈಯಿಂದಾದಷ್ಟು ಸಹಾಯ ಮಾಡಬೇಕು. ಈ ಮನೆಯ ಹೆಣ್ಣು ಮಗಳ ಜೀವನ ಸಾಗಲು ಶಾಶ್ವತ ಮನೆಯೊಂದು ಬೇಕು. ಸಹಾಯ ಮಾಡ ಬಯಸುವವರು ಈ ಕೆಳಗಿನ ಬ್ಯಾಂಕ್ ಗೆ ಹಣ ಪಾವತಿಸಬೇಕು. ಸಿಂಡಿಕೇಟ್ ಬ್ಯಾಂಕ್ ಸುಬ್ರಹ್ಮಣ್ಯ ಬ್ರಾಂಚ್ 02572610000726 ಐ.ಎಫ್.ಎಸ್.ಸಿ : ಎಸ್‌ವೈಎನ್‌ಬಿ 0000257

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.