Breaking News

ನಿಂತಿಕಲ್ಲು : ಶ್ರೀ ವನದುರ್ಗಾ ದೇವಿ ಸಾನಿಧ್ಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಶ್ರೀ ವನದುರ್ಗಾ ದೇವಿ ಸಾನಿಧ್ಯ ನಿಂತಿಕಲ್ಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ.25 ಮತ್ತು 26ರಂದು ನಡೆಯಲಿದ್ದು, ಇದರ ಸಮಿತಿ ಇತ್ತೀಚೆಗೆ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ವಸಂತ ನಡುಬೈಲು ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರೂಪರಾಜ್ ರೈ ಹಾಗೂ ಸಂಚಾಲಕರಾಗಿ ಅನೂಪ್ ಕುರ್ಮಾ ಆಳ್ವ ಕಟ್ಟಬೀಡು ಆಯ್ಕೆಗೊಂಡಿದ್ದಾರೆ. ಗೌರವ ಅಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಉಪಾಧ್ಯಕ್ಷರಾಗಿ ಗಿರಿಧರ ರೈ ಪಜಿಂಬಿಲ ಮತ್ತು ದಯಾನಂದ ಗೌಡ ನಡ್ಕ, ಜತೆ ಕಾರ್ಯದರ್ಶಿ ಯಾಗಿ ಯೋಗಾನಂದ ಉಳ್ಳೆಪಾಡಿ, ಕೋಶಾಧಿಕಾರಿ ಯಾಗಿ ಭಾಗೀರಥಿ ಮುರುಳ್ಯ ಇವರುಗಳ ಆಯ್ಕೆ ನಡೆದಿದೆ. ಅಲ್ಲದೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಅದರ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ.

 ಗೌರವ ಮಾರ್ಗದರ್ಶಕರಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ, ಒಡಿಯೂರು ಗುರುದೇವದತ್ತ ಸಂಸ್ಥಾನಮ್ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಸಂಸ್ಥಾನಮ್ ಮೋಹನದಾಸ ಸ್ವಾಮೀಜಿ, ಗೌರವ ಸಲಹೆಗಾರರಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್. ಅಂಗಾರ, ಡಾ. ಮಹಾಬಲೇಶ್ ಶೆಟ್ಟಿ, ಜಿ.ಪಂ ಸದಸ್ಯ ಎಸ್.ಎನ್. ಮನ್ಮಥ, ನಾರಾಯಣ ರೈ ಪಜಿಂಬಿಲ, ಉದಯಕುಮಾರ ಬೆಟ್ಟ, ರಘುನಾಥ ರೈ ಅಲೆಂಗಾರ, ಮಿಲ್ಕ್ ಮಾಸ್ಟರ್ ರಾಘವ ಗೌಡ, ಅಧ್ಯಕ್ಷರಾಗಿ ವಸಂತ ನಡುಬೈಲು , ಪ್ರ. ಕಾರ್ಯದರ್ಶಿಯಾಗಿ ರೂಪರಾಜ ರೈ ಕೆ., ಸಂಚಾಕಲಕರಾಗಿ ಅನೂಪ ಕುನೂರ್ ಆಳ್ವ ಕಟ್ಟಬೀಡು, ಗೌರವ ಅಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಉಪಾಧ್ಯಕ್ಷರುಗಳಾಗಿ ಗಿರಿಧರ ರೈ ಪಜಂಬಿಲ ಮತ್ತು ದಯಾನಂದ ಗೌಡ ನಡ್ಕ ನಿಂತಿಕಲ್ಲು, ಜೊತೆ ಕಾರ್ಯದರ್ಶಿಯಾಗಿ ಯೋಗಾನಂದ ಉಳೋಡಿ, ಕೋಶಾಧಿಕಾರಿಯಾಗಿ ಭಾಗಿರಥಿ ಮುರುಳ್ಯ, ಸದಸ್ಯರುಗಳಾಗಿ ಶ್ರೀನಾಥ ರೈ ಬಾಳಿಲ, ರಾಶೇಖರನ್ ಕೆ.ಕೆ., ಎಚ್ ವಸಂತ, ಪ್ರವೀಣ್ ಜಾಲ್ತಾರು, ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಕುಸುಮಾವತಿ ಕೆ.ಜಿ.ಎಣ್ಮೂರು ಗುತ್ತು, ವಿವಿಧ ಸಮಿತಿಯ ಸಂಚಾಲಕರಾಗಿ ಆಮಂತ್ರಣ ಸಮಿತಿ ಉಮೇಶ್ ರೈ ಮರುವಂಜ , ಆರ್ಥಿಕ ನಾರಾಯಣ ರೈ ಮರುವಂಜ, ಮಾಧ್ಯಮ ಮತ್ತು ಪ್ರಚಾರ ಸಚಿನ್ ಅರೆಂಬಿ, ಆಹಾರ ದಿನೇಶ್ ಪಜಿಂಬಿಲ, ಸ್ವಾಗತ ಪ್ರಸನ್ನ ಕೆ. ಗುಂಡಿಮಜಲು, ಸ್ವಯಂ ಸೇವಕ ಸಮಿತಿ ಕಾರ್ತಿಕ್ ರೈ ಕಲ್ಲೇರಿ, ಹಸಿರು ಕಾಣಿಕೆ ಮತ್ತು ಸ್ವಾಗತ ಸಮಿತಿ ದೇವಿಪ್ರಸಾದ್ ಎಣ್ಮೂರು, ವಾಹನ ಸಮಿತಿ ಬಾಲಕೃಷ್ಣ ರೈ ಎಣ್ಮೂರು, ಹಾಗೂ ವಿವಿಧ ಸದಸ್ಯರುಗಳಾಗಿ ಎಣ್ಮೂರು, ಮುರುಳ್ಯ, ಎಡಮಂಗಲ, ಕಲ್ಮಡ್ಕ, ಬಾಳಿಲ, ಮುಪ್ಪೇರ್ಯ ಗ್ರಾಮಗಳ ಒಟ್ಟು 152 ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ ಯವರ ಅಧ್ಯಕ್ಷತೆಯಲ್ಲಿ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಮಿತಿ ಆಯ್ಕೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.