Breaking News

ಅಮೇರಿಕಾದಲ್ಲಿ ನಡೆಯಲಿರುವ ವರ್ಲ್ಡ್ ಹಿಪ್‌ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್‌ಗೆ ಸುಳ್ಯದ ಇಬ್ಬರು ಯುವಕರು ಆಯ್ಕೆ

ಪುತ್ತೂರಿನ ಡಿಝೋನ್ ನೃತ್ಯ ತಂಡ ಮೇ ೧೧ ರಂದು ಗೋವಾದಲ್ಲಿ ನಡೆದ ಇಂಡಿಯನ್ ಹಿಪ್ ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ವಿಜೇತಗೊಂಡು ಆಗಸ್ಟ್ ನಲ್ಲಿ ಅಮೇರಿಕಾದ ಫೀನಿಕ್ಸ್ -ಅರಿಝೋನಾದಲ್ಲಿ ನಡೆಯಲಿರುವ ವರ್ಲ್ಡ್ ಹಿಪ್ ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಗೊಂಡಿದ್ದಾರೆ.
ದೇಶದ ಶ್ರೇಷ್ಠ ತಂಡಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿ ಮಿನಿಕ್ರೀವ್ ವಿಭಾಗದಲ್ಲಿ ಈ ತಂಡ ಕರ್ನಾಟಕವನ್ನು ಪ್ರತಿನಿಧಿಸಿತ್ತು ಎಂದು ಸಂಸ್ಥೆಯ ಕೊರಿಯೋಗ್ರಾಫರ್ ದೀಕ್ಷಿತ್ ರಾಜ್ ತಿಳಿಸಿದ್ದಾರೆ.
ಈ ತಂಡದಲ್ಲಿ ಐವರ್ನಾಡು ಗ್ರಾಮದ ಕೋಡ್ತಿಲು ಮನೆತನದ ಕನಕಮಜಲಿನಲ್ಲಿ ನೆಲೆಸಿರುವ ದಾಮೋದರ ಗೌಡ ಕೋಡ್ತಿಲು ರವರ ಪುತ್ರ ದೀಕ್ಷಿತ್ ರಾಜ್ ಕೋಡ್ತಿಲು ,ಕನಕಮಜಲು ಗ್ರಾಮದ ನರಿಯೂರು ಭಾಸ್ಕರ ಗೌಡರವರ ಪುತ್ರ ಗಗನ್ ದೀಪ್ ಹಾಗೂ ಪುತ್ತೂರಿನ ನಿಖಿಲ್ ಆಶ್ಲಿ ಮರೀಲ್ ತಂಡದ ಸದಸ್ಯರು.

ಪ್ರಾಯೋಜಕರು ಸಹಕರಿಸಬಹುದು:

ಅಮೇರಿಕಾದಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ವರ್ಲ್ಡ್ ಹಿಪ್ ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಅಗಾಧ ಮೊತ್ತದ ವೆಚ್ಚ ತಗಲಲಿದ್ದು ದಾನಿಗಳು, ಪ್ರಾಯೋಜಕರು ಸಹಕರಿಸುವುದಿದ್ದರೆ ಈ ಪ್ರತಿಭೆಗಳಿಗೆ ಪೋತ್ಸಾಹ ನೀಡಿದಂತಾಗುತ್ತದೆ. ಆಸಕ್ತರು ಇವರನ್ನು ಸಂಪರ್ಕಿಸಬಹುದು.

ಮೊ:9880471186

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.