Breaking News

ಪಂಜ: ವನಿತಾ ಮಹಿಳಾ ಮಂಡಲದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1 ಲಕ್ಷ ರೂ. ಧನಸಹಾಯ

ಪಂಜದ ವನಿತಾ ಮಹಿಳಾ ಮಂಡಲದ ಕಟ್ಟಡ ನಿರ್ಮಾಣಕ್ಕಾಗಿ ಸಹಾಯಧನ ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿದ್ದು, ರೂ. 1 ಲಕ್ಷವನ್ನು ಮೇ. 13ರಂದು ಶ್ರೀಮತಿ ಪ್ರಿಯದರ್ಶಿನಿ ಶ್ರೇಯಾಂಸ್‌ಕುಮಾರ್ ಶೆಟ್ಟಿಮೂಲೆಯವರು ಕಟ್ಟಡ ಸಮಿತಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ.ದೇವಿಪ್ರಸಾದ್‌ರವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈ, ಪಂಜ ವಲಯ ಮೇಲ್ವಿಚಾರಕ ವಸಂತ್, ಕೂತ್ಕುಂಜ ಒಕ್ಕೂಟದ ಸೇವಾ ಪ್ರತಿನಿಧಿ ರೋಹಿಣಿ ಆರ್ನೋಜಿ, ಕೂತ್ಕುಂಜ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಸಂಪ, ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಚಂದ್ರಾ ಚಿದ್ಗಲ್, ಖಜಾಂಜಿ ಸತ್ಯಕಲಾ ಗುಂಡಡ್ಕ, ಸದಸ್ಯೆ ಯಶೋಧಾ ಅನುಪಮ ಕುದ್ವ, ಪೂರ್ಣಿಮಾ ಜಾಕೆ, ರತ್ನಾವತಿ ಸಂಕಡ್ಕ, ಸವಿತಾ ಪಂಜ, ಪ್ರತಿಮಾ ರೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.