ಪ್ರೇಮ್ ಕುಮಾರ್ ಪರಿವಾರಕಾನ ಆತ್ಮಹತ್ಯೆ


ಸುಳ್ಯ ಕಸಬಾದ ಪರಿವಾರಕಾನ ನಿವಾಸಿ ದಿ. ಕೊರಗ ಪಾಟಾಳಿಯವರ ಪುತ್ರ ಪ್ರೇಮ್ ಕುಮಾರ್ ಪರಿವಾರಕಾನ ತನ್ನ ಮನೆಯಲ್ಲಿ ಮೇ.15 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಮೃತರು ಸುಮಾರು ಒಂದೂವರೆ ವರ್ಷದ ಹಿಂದೆ ಅನಾರೋಗ್ಯ ಬಾಧಿತರಾಗಿದ್ದು ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮತ್ತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಸುಮಾರು ಏಳೂವರೆ ತಿಂಗಳಿನಿಂದ ತನ್ನ ಅಕ್ಕನ ಮನೆ ಕೊಯಿನಾಡು ವಿನಲ್ಲಿ ವಾಸಿಸುತ್ತಿದ್ದರು. ದಿನಂಪ್ರತಿ ಸುಳ್ಯಕ್ಕೆ ಬಂದು ಹೋಗುತ್ತಿದ್ದರು. ಮೇ. 14 ರಂದು ಬೆಳಗ್ಗೆ ಎಂದಿನಂತೆ ಸುಳ್ಯಕ್ಕೆ ಬಂದವರು ಸಂಜೆ ಬರಬೇಕಾದವರು ರಾತ್ರಿಯಾದರೂ ಬರದೇ ಇದ್ದುದರಿಂದ ದೂರವಾಣಿ ಕರೆ ಮಾಡಿದರು. ಕರೆಯನ್ನು ಸ್ವೀಕರಿಸದಿದ್ದಾಗ ಮರುದಿನ ಬೆಳಗ್ಗೆ ಪರಿವಾರಕಾನದಲ್ಲಿರುವ ಮನೆಗೆ ಮೃತರ ಬಾವ ಸುಬ್ಬ ಪಾಟಾಳಿಯವರು ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಕಂಡು ತಕ್ಷಣ ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದರು. ಆಗಮಿಸಿದ ಪೊಲೀಸರು ಮೃತದೇಹದ ಮಹಜರು ಮಾಡಿ ಪೋಸ್ಟ್ ಮಾರ್ಟಂಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿದರು. ಮೃತರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಅವಿವಾಹಿತರಾಗಿದ್ದು ಸಹೋದರಿಯರಾದ ಶ್ರೀಮತಿ ಜಲಜಾಕ್ಷಿ ಕೊಯಿನಾಡು, ಶ್ರೀಮತಿ ವಿಜಯಲತಾ ಬೆಂಗಳೂರು, ಶ್ರೀಮತಿ ವಿನಯ ಪೆರ್ಣೆ, ಹಾಗೂ ಬಾವಂದಿರಾದ ಸುಬ್ಬಪಾಟಾಳಿ, ಜಗನ್ನಾಥ, ನವೀನ್ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.