Breaking News

ವಾಟ್ಸ್‌ಆಪ್‌ಗೆ ಹ್ಯಾಕರ್‌ಗಳ ಕಾಟ!


ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ ಎಂಬ ಕಳ್ಳಜಾಲಕ್ಕೆ ಸೇರಿದ ಹ್ಯಾಕರ್‌ಗಳು ವಾಟ್ಸ್‌ಆಪ್ ಇರುವ ಮೊಬೈಲ್‌ಗಳಿಗೆ ಲಗ್ಗೆ ಹಾಕಿದ್ದು, ಆ ಮೊಬೈಲ್‌ಗಳಲ್ಲಿದ್ದ ಖಾಸಗಿ ಮಾಹಿತಿ ಕಳವು ಮಾಡಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಇದರ ನಿಗ್ರಹಕ್ಕಾಗ ಈಗ ವಾಟ್ಸ್‌ಆಪ್ ಅಪ್‌ಡೇಟ್ ಅನ್ನು ಗೂಗಲ್ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದ್ದು, ವಾಟ್ಸ್‌ಆಪ್ ಬಳಕೆದರರು ಇದನ್ನು ತತ್‌ಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
ವಾಟ್ಸ್‌ಆಪ್, ತನ್ಮೂಲಕ ಸಂವಹನಗೊಳ್ಳುವ ಮಾಹಿತಿಯನ್ನು ’ಎನ್‌ಕ್ರಿಪ್ಶನ್’ ಮಾದರಿಯಡಿ ಸಂರಕ್ಷಿಸುತ್ತದೆ. ಆದರೆ, ಈ ವ್ಯವಸ್ಥೆಯಲ್ಲಿ ಇರಬಹುದಾದ ಸಣ್ಣಪುಟ್ಟ ಲೋಪಗಳನ್ನೇ ಪತ್ತೆ ಹಚ್ಚಿರುವ ಅತ್ಯಾಧುನಿಕ ಸಾಫ್ಟ್‌ವೇರ್ ಹ್ಯಾಕರ್‌ಗಳು, ಹೊಸ ಕಂಪ್ಯೂಟರ್ ಪ್ರೋಗ್ರಾಮ್ ಸೃಷ್ಟಿಸಿದ್ದಾರೆ. ಗ್ರಾಹರಿಗರ ಒಂದು ಫೋನ್ ಕರೆಮಾಡಿ ಆ ಪ್ರೋಗ್ರಾಮನ್ನು ಮೊಬೈಲ್‌ಗಳಲ್ಲಿ ಗುಟ್ಟಾಗಿ ಅಳವಡಿಸಿ, ಅದರಲ್ಲಿರುವ ಗ್ರಾಹರ ಮೇಲ್ ವಿವರ, ಫೋಟೋ ಸೇರಿ ಹಲವಾರು ಮಾಹಿತಿಗಳನ್ನು ಕದಿಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.